ತಿರುವನಂತಪುರ: ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನ ರೀತಿಯ ವಿವಾಹ ಕರೆಯೋಲೆಯೊಂದು ಕೇರಳದಾದದ್ಯಂತ ವೈರಲ್ ಆಗಿದೆ. ವಿವಾಹದ ಬದಲು ಪ್ರಮಾಣವಚನ ಸ್ವೀಕರಿಸಲು ಸ್ಥಳೀಯರನ್ನು ಆಹ್ವಾನಿಸುವ ಈ ವಿವಾಹ ಕರೆಯೋಲೆಯು ಪೇಸ್‍ಬುಕ್‍ನಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ವಿವಾಹ ಸಮಾರಂಭವು ಪ್ರಮಾಣವಚನ ಸಮಾರಂಭದ ರೀತಿಯಲ್ಲಿ ನಡೆಸಲು ಉದ್ದೇಶಿಸಲಾಗಿತ್ತೆಂದು ಕರೆಯೋಲೆಯಲ್ಲಿ ಹೇಳಲಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿರುವಂತೆ ವಿವಾಹ ಸಮಾರಂಭಗಳಿಗೆ 20 ಮಂದಿ ಜನರು ಭಾಗವಹಿಸಬಬಹುದು. ಆದರೆ ಸರ್ಕಾರದ ಪ್ರಮಾಣವಚನ ಸಮಾರಂಭದಲ್ಲಿ 500 ಮಂದಿಗೆ ಅವಕಾಶ ನೀಡಲಾಗಿದೆ. ಸರ್ಕಾರದ ಇಂತಹ ಇಬ್ಬಗೆ ನೀತಿಯನ್ನು ಅಪಹಾಸ್ಯಗೈದು ವಿಶಿಷ್ಟ ವಿವಾಹ ಕರೆಯೋಲೆ ಬಿಡುಗಡೆ ಮಾಡಲಾಗಿದೆ. ಕೊರೋನಾ ಮಾನದಂಡ ಅನುಸರಣೆಯ ಭಾಗವಾಗಿ 20 ರಂದು ನಡೆಯಬೇಕಿದ್ದ ರಮಣನ್ ಮತ್ತು ಚಂದ್ರಿಕಾ ಅವರ ವಿವಾಹವನ್ನು ಮುಂದೂಡಲಾಗಿದೆ. ವಿವಾಹ ಕಾರ್ಯಕ್ರಮದಂತೆ ನವ ದಂಪತಿಗಳು ಅದೇದಿನ ಬೆಳಿಗ್ಗೆ 10 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬರೆಯಲಾಗಿದೆ.
ಟಿಪ್ಪಣಿಯಲ್ಲಿ, ಮದುವೆಗೆ ಕೇವಲ 100 ಜನರನ್ನು ಆಹ್ವಾನಿಸಲಾಗಿದೆ, ಆದರೆ ಇದು ಪ್ರಮಾಣವಚನವಾದ್ದರಿಂದ, ಇದನ್ನು ಪ್ರಕಟಣೆಯೆಂದು ಪರಿಗಣಿಸಬಹುದು ಮತ್ತು 750 ಜನರು ಭಾಗವಹಿಸಬಹುದು ಎಂದು ಉಲ್ಲೇಖಿಸಲಾಗಿದೆ. ಫೇಸ್‍ಬುಕ್ ಪೆÇೀಸ್ಟ್ ವಾಟ್ಸಾಪ್ ನಲ್ಲೂ ಭಾರಿ ಪ್ರಮಾಣದಲ್ಲಿ ಪ್ರಸಾರವಾಗಿದೆ.
ಲಾಕ್ ಡೌನ್ ಉಲ್ಲಂಘಿಸಿ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ನಡೆಸಲು ಉದ್ದೇಶಿಸಿರುವ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ಮತ್ತು ಅಪಹಾಸ್ಯಗಳು ಮೂಡಿಬಂದಿದೆ. ಏತನ್ಮಧ್ಯೆ, ರಮಣನ್ ಮತ್ತು ಚಂದ್ರಿಕಾ ಅವರ ವಿವಾಹ ವೈರಲ್ ಆಗುತ್ತಿದೆ.