ಬದಿಯಡ್ಕ: ಕಟ್ಟಿ ಹಾಕಿದ್ದ ಶ್ವಾನವೊಂದಕ್ಕೆ ಅಜ್ಞಾತ ಪ್ರಾಣಿಯೊಂದು ಹಠಾತ್ ದಾಳಿ ನಡೆಸಿ ಮಾರಣಾಂತಿಕಗೊಳಿಸಿದ ಘಟನೆ ಏತಡ್ಕ ಸಮೀಪದಲ್ಲಿ ಇಂದು ಮುಂಜಾನೆ ನಡೆದಿದ್ದು ಸ್ಥಳೀಯರನ್ನು ಭೀತಿಗೆ ತಳ್ಳಿದೆ.
ಏತಡ್ಕ ಸಮೀಪದ ಪಳ್ಳಿತ್ತಡ್ಕ ಉಮೇಶ ಎಂಬವರ ಮನೆಯ ಎದುರು ಕಟ್ಟಿಹಾಕಲಾಗಿದ್ದ ಶ್ವಾನಕ್ಕೆ ಇಂದು ಮುಂಜಾನೆ ಅಜ್ಞಾತ ಜೀವಿ ದಾಳಿ ನಡೆಸಿರುವುದು ಕಂಡುಬAದಿದೆ. ಮುಂಜಾನೆ ೪.೩೫ರ ವೇಳೆ ನಾಯಿಯ ಜೀವ ಭಯದ ನರಳಾಟ ಕೇಳಿದ ಮನೆಮಂದಿ ಹೊರಬಂದು ನೋಡಿದಾಗ ಶ್ವಾನದ ಮೇಲೆ ದಾಳಿ ನಡೆಸಿರುವುದು ಕಂಡುಬAತು. ಶ್ವಾನದ ಕುತ್ತಿಗೆಯಿಂದ ಅಲ್ಪ ಕೆಳಗೆ ಕಚ್ಚಿದ ಅಜ್ಞಾತ ಜೀವಿ ಮುಂಗಾಲಿನ ಮೇಲ್ಬದಿಯ ಮಾಂಸವನ್ನು ಕಿತ್ತಿರುವುದು ಕಂಡುಬAದಿದೆ. ಮನೆ ಪರಿಸರದಲ್ಲಿ ಆ ಜೀವಿಯ ಹೆಜ್ಜೆ ಗುರುತುಗಳೂ ಕಂಡುಬAದಿದೆ. ಇದೀಗ ಶ್ವಾನದ ಮೇಲೆ ಮಾರಣಾಂತಿಕ ಹಲ್ಲೆಗೈದ ಅಜ್ಞಾತ ಪ್ರಾಣಿಯ ಬಗ್ಗೆ ಸ್ಥಳೀಯರಲ್ಲಿ ಭಾರೀ ಆತಂಕ ವ್ಯಕ್ತಗೊಂಡಿದೆ.
ಘಟನೆಯ ಬಗ್ಗೆ ಪ್ರಗತಿಪರ ಕೃಷಿಕ, ಬರಹಗಾರ ಚಂದ್ರಶೇಖರ ಏತಡ್ಕ ಹಲ್ಲೆಗೊಳಗಾದ ಶ್ವಾನದ ಮನೆಯವರನ್ನು ಭೇಟಿಯಾಗಿ ಮಾಹಿತಿ ವೀಡಿಯೋ ಹಂಚಿದ್ದಾರೆ.