ಕಾಸರಗೋಡು: ಕೋವಿಡ್ ಪ್ರತಿರೋಧ ಚಟುವಟಿಕೆಗಳಲ್ಲಿ ಮಾದರಿ ಸೇವೆ ಸಲ್ಲಿಸುತ್ತಿರುವ ಪೆರಿಯದ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ನಡೆಸಲಾಗುವ ಪ್ರತಿ ದಿನದ ಕೋವಿಡ್ ತಪಾಸಣೆಯ ಸಂಖ್ಯೆ ಸಾವಿರದ ಗಡಿ ದಾಟಿದೆ.
ಕೋವಿಡ್ ಮೊದಲ ಅಲೆಯ ಅವಧಿಯಲ್ಲಿ ಪ್ರತಿದಿನ ಸರಾಸರಿ 500 ರಿಂದ 600 ಸ್ಯಾಂಪಲ್ ಗಳನ್ನು ತಪಾಸಣೆಗೆ ಕಳುಹಿಸಲಾಗುತ್ತಿದ್ದರೆ, ಪ್ರಸಕ್ತ ಇದು 1200 ಆಗಿ ಹೆಚ್ಚಳಗೊಂಡಿದೆ. ಮೇ 11ರ ವರೆಗೆ ವರೆಗೆ ಒಟ್ಟು 1,07,376 ಮಂದಿಯ ಸ್ಯಾಂಪಲ್ ತಪಾಸಣೆ ನಡೆಸಲಾಗಿದೆ.
ಕೋವಿಡ್ ತಪಾಸಣೆ ಅಬಾಧಿತ: ಉಪಕುಲಪತಿ
ಕೋವಿಡ್ ಪ್ರತಿರೋಧ ಚಟುವಟಿಕೆಗಳು ಮುಂದುವರಿಯಲಿದ್ದು, ಶಾಶ್ವತ ಸೌಲಭ್ಯವೂ ಇಲ್ಲಿ ಸಿದ್ಧವಾಗುತ್ತಿರುವುದಾಗಿ ಕೇಂದ್ರೀಯ ವಿಶ್ವ ವಿದ್ಯಾಲಯ ಉಪಕುಲಪತಿ ಪೆÇ್ರ. ಎಚ್.ವೆಂಕಟೇಶ್ವರುಲು ತಿಳಿಸಿದ್ದಾರೆ. ಕೊರೋನಾ ವೈರಸ್ ಬಗ್ಗೆ ಸಮಗ್ರ ಅಧ್ಯಯನ ಸಂಬಂಧ ಪ್ರತಿ ತಿಂಗಳು ಸುಮಾರು 300 ಮಾದರಿ ಹಸ್ತಾಂತರಿಸಲಾಗುತ್ತದೆ. ಈ ವರೆಗೆ ಲಭಿಸಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಯು.ಕೆ. ತಳಿ, ಭಾರತೀಯ ತಳಿ, ದಕ್ಷಿಣ ಆಫ್ರಿಕಾ ತಳಿಗಳನ್ನು ಖಚಿತಪಡಿಸಲಾಗಿದೆ. ಕೇಂದ್ರ ವಿವಿಯಲ್ಲಿರುವ ಸೌಲಭ್ಯ ಬಳಸಿ ವೈರಸ್ ಜಾನಾಂಗಿಕ ಅಧ್ಯಯನ ಸಂಬಂಧ ತಪಾಸಣೆ ಆರಂಭಿಸುವ ಯೋಜನೆಯ ಶಿಫಾರಸು ಸಲ್ಲಿಸಲಾಗಿದೆ. ಜಿಲ್ಲೆಯಲ್ಲೇ ಈ ಸೌಲಭ್ಯ ಆರಂಭಿಸಿದರೆ ಪರಿಣಾಮಕಾರಿಯಾಗಿ ಅತ್ಯುತ್ತಮ ಪ್ರತಿರೋಧ ಚಟುವಟಿಕೆಗಳನ್ನು ನಡೆಸುವ ನಿರೀಕ್ಷೆಗಳಿರುವುದಾಗಿ ತಿಳಿಸಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆಯ ಕೇಳಿಕೆ ಪ್ರಕಾರ ಕಳೆದ ವರ್ಷ ಮಾ.30ರಂದು ಕೋವಿಡ್ ತಪಾಸಣೆಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್(ಐ.ಸಿ.ಎಂ.ಆರ್.)ನ ಅಂಗೀಕಾರ ಲಭಿಸಿತ್ತು. ಕಾಸರಗೊಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಬಾಧಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದನ್ನು ಮನಗಂಡು, ರಾಜ್ಯ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತೆಯ ಆದೇಶ ಪ್ರಕಾರ ಕೇಂದ್ರೀಯ ವಿವಿಯ ವೈರಾಲಜಿ ಲಾಬ್ ನಲ್ಲಿ ಕೋವಿಡ್ ತಪಾಸಣೆ ಆರಂಭಿಸಲಾಗಿತ್ತು.