ಆಲಪ್ಪುಳ: ಕೋವಿಡ್ ಲಾಕ್ ಡೌನ್ ಉಲ್ಲಂಘಿಸಿ ಮೈದಾನದಲ್ಲಿ ಕ್ರಿಕೆಟ್ ಆಡಿದವರಿಗೆ ಪೋಲೀಸರು ಸಾಮಾಜಿಕ ಸೇವಾ ಶಿಕ್ಷೆ ನೀಡಿದ್ದಾರೆ. ಹರಿಪ್ಪಾಡ್ ಮಹಾದೇವಿಕಾಟ್ ನಲ್ಲಿ ನಿನ್ನೆ ಈ ಘಟನೆ ನಡೆದಿದೆ. ಕ್ರಿಕೆಟ್ ಆಡಿದ್ದಕ್ಕಾಗಿ ತ್ರಿಕ್ಕಣ್ಣಪುಳ ಪೋಲೀಸರು ಏಳು ಜನರಿಗೆ ಶಿಕ್ಷೆ ವಿಧಿಸಿದ್ದಾರೆ.
ಲಾಕ್ ಡೌನ್ ನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಭಾಗವಾಗಿ ನಡೆಸಿದ ತಪಾಸಣೆಯ ಸಂದರ್ಭದಲ್ಲಿ ಕ್ರಿಕೆಟ್ ಪಂದ್ಯಾಟದಲ್ಲಿ ನಿರತರಾಗಿದ್ದ ಯುವಕರ ತಂಡವನ್ನು ಪೋಲೀಸರು ಪತ್ತೆಹಚ್ಚಿದರು. ಬಳಿಕ ಎಲ್ಲಾ ಏಳು ಮಂದಿಯನ್ನು ಠಾಣೆಗೆ ಕರೆದೊಯ್ದು ಶಿಕ್ಷೆ ವಿಧಿಸಲಾಯಿತು. ಶಿಕ್ಷೆ ಏನೆಂದರೆ ಪೂರ್ತಿ ಒಂದು ದಿನ ಸಮುದಾಯ ಸೇವೆ ಮಾಡುವುದಾಗಿದೆ.
ವಿವಿಧ ಪ್ರದೇಶಗಳಲ್ಲಿ ಕೋವಿಡ್ ಕಾನೂನು ಪರಿಶೀಲನೆಯಲ್ಲಿ ಭಾಗವಹಿಸುವ ಮೂಲಕ ಕೊರೋನಾ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವ ಮಹತ್ವದ ಬಗ್ಗೆ ಜನರಿಗೆ ತಿಳಿಸುವುದು ಕ್ರಿಕೆಟ್ ಆಡಿ ಸಿಕ್ಕಿಬಿದ್ದ ಯುವಕರಿಗೆ ಪೋಲೀಸರು ಶಿಕ್ಷೆ ನೀಡಿ ಹೊಸ ಧ್ಯೇಯವೊಂದರ ಮೂಲಕ ಪರಿವರ್ತನೆಗೆ ಕಾರಣರಾದರು.