ಕಾಸರಗೋಡು: ರಾಜ್ಯ ಸರಕಾರದ ಹೋಮಿಯೋಪತಿ ಇಲಾಖೆ ವ್ಯಾಪ್ತಿಯ ಕಾಞಂಗಾಡು ಜಿಲ್ಲಾ ಹೋಮಿಯೋ ಆಸ್ಪತ್ರೆಯ ಆಯುಷ್ಮಾನ್ ಭವ ಯೋಜನೆ ವತಿಯಿಂದ ಸಾರ್ವಜನಿಕರಿಗಾಗಿ ಆನ್ ಲೈನ್ ಯೋಗ ಉಚಿತ ತರಬೇತಿ ಆರಂಭಗೊಂಡಿದೆ. ಹೋಮಿಯೋಪತಿ ಜಿಲ್ಲಾ ವೈದ್ಯಾಧಿಕಾರಿ ಡಾ.ಐ.ಆರ್.ಅಶೋಕ್ ಕುಮಾರ್ ಆನ್ ಲೈನ್ ರೂಪದಲ್ಲಿ ತರಬೇತಿ ಉದ್ಘಾಟಿಸಿದರು. ಕಾಞಂಗಾಡು ಜಿಲ್ಲಾ ಹೋಮಿಯೋಪತಿ ವರಿಷ್ಠಾಧಿಕಾರಿ ಡಾ.ಕೆ.ರಾಮಸುಬ್ರಹ್ಮಣ್ಯಂ ಅಧ್ಯಕ್ಷತೆ ವಹಿಸಿದ್ದರು. ಆಯುಷ್ಮಾನ್ ಭವ ಯೋಜನೆಯ ಜಿಲ್ಲಾ ಸಂಚಾಲಕ ಡಾ.ಮುಜೀಬ್ ರಹಮಾನ್ ಸಿ.ಎಚ್. ಸ್ವಾಗತಿಸಿದರು. ಆಯುಷ್ ಮಿಷನ್ ವೈದ್ಯಾಧಿಕಾರಿ ಡಾ.ಸುನೀರ ಇ.ಕೆ.ವಂದಿಸಿದರು. ಲಾಕ್ ಡೌನ್ ಅವಧಿಯಲ್ಲಿ ಯೋಗತರಬೇತಿ ಎಂಬ ವಿಷಯದಲ್ಲಿ ಯೋಗ-ನ್ಯಾಚುರೋಪತಿ ವೈದ್ಯಾಧಿಕಾರಿ ಡಾ. ಗಣೇಶ್ ವಾಸುದೇವನ್ ಜಾಗೃತಿ ತರಗತಿ ನಡೆಸಿದರು.
ಪ್ರತಿದಿನ ಬೆಳಗ್ಗೆ 7 ಗಂಟೆಯಿಂದ ಗೂಗಲ್ ಮೀಟ್ ಮೂಲಕ ಯೋಗ ತರಬೇತಿ ನಡೆಯಲಿದೆ. ಆಸಕ್ತರು ಆನ್ ಲೈನ್ ಮೀಟಿಂಗ್ ಲಿಂಕ್ ಗಾಗಿ ಎಂಬ ಈ-ಮೇಲ್ವಿಳಾಸ ಯಾ 9400061908 ಎಂಬ ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಬಹುದು ಎಂದು ಹೋಮಿಯೋಪತಿ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.