ತಿರುವನಂತಪುರ: ರಾಜ್ಯದಲ್ಲಿ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. 12 ಎಕ್ಸ್‍ಪ್ರೆಸ್ ರೈಲುಗಳು ಸೇರಿದಂತೆ ಮೂವತ್ತೇಳು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮೇ. 31 ರವರೆಗೆ ಸೇವೆಗಳನ್ನು ರದ್ದುಗೊಳಿಸಲಾಗಿದೆ.
ಸೇವೆಗಳನ್ನು ರದ್ದುಗೊಳಿಸುವ ನಿರ್ಧಾರವು ಲಾಕ್ ಡೌನ್‍ಗೆ ಯಾವುದೇ ಸಂಬಂಧವಿಲ್ಲ ಮತ್ತು ಕಡಿಮೆ ಸಂಖ್ಯೆಯ ಪ್ರಯಾಣಿಕರನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಹೇಳಿದೆ. ಕಣ್ಣೂರು ಜನಶತಾÀಬ್ದಿ, ವಂಚಿನಾಡ್ ಎಕ್ಸ್‍ಪ್ರೆಸ್, ಪಾಲರುವಿ ಎಕ್ಸ್‍ಪ್ರೆಸ್, ಅಂತ್ಯೋದಯ ಎಕ್ಸ್‍ಪ್ರೆಸ್, ಏರ್ನಾಡ್, ಬೆಂಗಳೂರು ಇಂಟರ್ಸಿಟಿ, ಬನಸ್ವಾಡಿ - ಎರ್ನಾಕುಳಂ, ಮಂಗಳೂರು - ತಿರುವನಂತಪುರ, ನಿಜಾಮುದ್ದೀನ್ - ತಿರುವನಂತಪುರ ವಾರದ ರೈಲು ಸಂಚಾರಗಳು ರದ್ದುಗೊಂಡಿದೆ. ಏತನ್ಮಧ್ಯೆ, ಕೋಝಿಕ್ಕೋಡ್ ಜನಶತಾಬ್ಡಿ ಸೇರಿದಂತೆ ಇತರ ರೈಲುಗಳು ಸೇವೆಯಲ್ಲಿ ಇರಲಿವೆ.