ತಿರುವನಂತಪುರ: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಸ್ತುತ ಆಮ್ಲಜನಕದ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಆಸ್ಪತ್ರೆಯ ಆಮ್ಲಜನಕದ ಅಗತ್ಯವನ್ನು ನಿರ್ಣಯಿಸಲದು ಜಿಲ್ಲಾ ಮಟ್ಟದ ಸಮಿತಿಗಳನ್ನು ನೇಮಿಸಲಾಗುವುದು. ಖಾಸಗಿ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಸಹ ಪೂರೈಸಲಾಗುವುದು ಎಂದು ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಆಮ್ಲಜನಕ ಪೂರೈಕೆಯಲ್ಲಿ ಪ್ರಸ್ತುತ ಯಾವುದೇ ಸಮಸ್ಯೆಗಳಿಲ್ಲ. ಆದರೆ ಸೋಂಕು ಹೆಚ್ಚಳಗೊಂಡಂತೆ ಆಮ್ಲಜನಕದ ಬೇಡಿಕೆ ಹೆಚ್ಚಬಹುದು. ಆದ್ದರಿಂದ ಹೆಚ್ಚು ಸಂಗ್ರಹಿಸುವ ಗುರಿ ಇರಿಸಲಾಗಿದೆ. ಆರೋಗ್ಯ ಇಲಾಖೆಯು ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಆಮ್ಲಜನಕದ ಲಭ್ಯತೆಯ ಬಗ್ಗೆ ಆರೋಗ್ಯ ಇಲಾಖೆ ಖಾತ್ರಿಪಡಿಸಬೇಕು. ಯಾವುದೇ ಲೋಪಗಳಾಗದಂತೆ ಆರೋಗ್ಯ ಇಲಾಖೆ ಗಮನಿಸಬೇಕು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಆಮ್ಲಜನಕದ ಬೇಡಿಕೆ ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ, ಮೀಸಲು ವ್ಯವಸ್ಥೆಗೆ ಕೇಂದ್ರದ ಸಹಾಯವನ್ನು ಕೋರಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಮೊದಲ ಕಂತಿನಲ್ಲಿ ಕೇರಳಕ್ಕೆ 500 ಮೆಟ್ರಿಕ್ ಟನ್ ಮತ್ತು ಮುಂದಿನ ಕಂತಿನಲ್ಲಿ ಇನ್ನೂ 500 ಟನ್ ಲಸಿಕೆ ಹಂಚಿಕೆಯಾಗಲಿದೆ ಎಂದರು.