HEALTH TIPS

ಕೋವಿಡ್ ಆತಂಕ ಕಡಿಮೆಗೊಳಿಸಲು ಜೊತೆಗಿದೆ ಮಾಸ್ಟರ್ ಯೋಜನೆ : ವಿಭಿನ್ನ ರೀತಿಯ ಜನಜಾಗೃತಿಯೊಂದಿಗೆ ರಂಗದಲ್ಲಿದ್ದಾರೆ ಮಾಸ್ಟರ್ ಯೋಜನೆ ಸಿಬ್ಬಂದಿ

                             

         ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಪಾಸಿಟಿವಿಟಿ ಗಣನೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಮಟ್ಟದಲ್ಲಿ ಜನಜಾಗೃತಿ ಪ್ರಬಲಗೊಳಿಸಿ, ಕೋವಿಡ್ ಬಾಧಿತರ ಮತ್ತು ಕ್ವಾರೆಂಟೈನ್ ನಲ್ಲಿರುವವರ ಆತಂಕಗಳನ್ನು ಕಡಿಮೆಗೊಳಿಸುವ ಉದ್ದೇಶಗಳೊಂದಿಗೆ ಮಾಸ್ಟರ್ ಯೋಜನೆಯ ಕಾರ್ಯಕರ್ತರು ರಂಗದಲ್ಲಿದ್ದಾರೆ. 

              ಜಿಲ್ಲೆಯ ವಲಿಯಪರಂಬ ಗ್ರಾಂ ಪಂಚಾಯತ್ ನಲ್ಲಿ ಆರಂಭಗೊಂಡ ಟೆಲಿ ಕೌನ್ಸಿಲಿಂಗ್ ಯೋಜನೆ ಇತರ ಗ್ರಾಮ ಪಂಚಾಯತ್ ಗಳಿಗೂ ವಿಸ್ತರಿಸುವ ಚಟುವಟಿಕೆ ನಡೆಯುತ್ತಿದೆ. ಸದ್ರಿ ಪಳ್ಳಿಕ್ಕರೆ ಗ್ರಾಮ ಪಂಚಾಯತ್ ನಲ್ಲಿ ಯೋಜನೆ ಆರಂಭಗೊಂಡಿದೆ. ಒಂದು ವಾರ್ಡ್ ನಲ್ಲಿ 5 ಮಂದಿ ಶಿಕ್ಷಕರು ಎಂಬ ಕ್ರಮದಲ್ಲಿ ಜಿಲ್ಲೆಯ 777 ವಾರ್ಡ್ ಗಳಲ್ಲಿ ಮಾಸ್ಟರ್ ಯೋಜನೆಯ ಕಾರ್ಯಕರ್ತರು ಸಕ್ರಿಯರಾಗಿದ್ದಾರೆ. ವಾರ್ಡ್ ಗಳಲ್ಲಿ ಹೊಣೆಯಿರುವ ಶಿಕ್ಷಕರು ಆಯಾ ವಾರ್ಡ್ ಗಳ ಜನತೆಯ ಸಂಕಷ್ಟ ಆಲಿಸಿ, ಅವರಿಗೆ ಸಾಂತ್ವನ ನೀಡಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1880 ಶಿಕ್ಷಕರು ಮಾಸ್ಟರ್ ಯೋಜನೆಯಲ್ಲಿಚಟುವಟಿಕೆ ನಡೆಸುತ್ತಿದ್ದಾರೆ. ನೂತನ

ಯೋಜನೆಯ ಅಂಗವಾಗಿ 703 ಶಿಕ್ಷಕರು ಕೂಡಾ ರಂಗದಲ್ಲಿದ್ದಾರೆ ಎಂದು ಮಾಸ್ಟರ್ ಯೋಜನೆಯ ಜಿಲ್ಲಾ ಲೈಸನ್ ಅಧಿಕಾರಿ ಪಿ.ಸಿ.ವಿದ್ಯಾ ತಿಳಿಸಿದರು.  

           ಜನಜಾಗೃತಿ ಚಟುವಟಿಕೆಗಳಿಗಾಗಿ ವಾರ್ಡ್ ಮಟ್ಟದಲ್ಲಿ ಜಾಗೃತಿ ಸಮಿತಿಗಳು, ರಾಪಿಡ್ ಆಕ್ಷನ್ ಫೆÇೀರ್ಸ್ ಟೀಂ ಇತ್ಯಾದಿಗಳೊಂದಿಗೆ ಜಿಲ್ಲೆಯ ಶಿಕ್ಷಕರು ಚಟುವಟಿಕೆ ನಡೆಸುತ್ತಿದ್ದಾರೆ. ಕೋವಿಡ್ ಪ್ರಥಮ ಹಂತದಲ್ಲಿ ಜಿಲ್ಲೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಚಟುವಟಿಕೆ ನಡೆಸಿದ್ದ ಶಿಕ್ಷಕರು ದ್ವಿತೀಯ ಹಂತದಲ್ಲೂ ಸ್ಥಳೀಯ ಮಟ್ಟದಲ್ಲಿ ಸಕ್ರಿಯವಾಗಿ ರಂಗದಲ್ಲಿದ್ದಾರೆ. ಪ್ರತಿ ವಾರ್ಡ್ ನಲ್ಲೂ ಜಾಗೃತಿ ಸಮಿತಿಗಳನ್ನು ಪ್ರಬಲಗೊಳಿಸುವುದು, ಅದಕ್ಕಾಗಿ ವಾರ್ಡ್ ನಲ್ಲಿ ಹೊಣೆಹೊಂದಿರುವ ಶಿಕ್ಷಕರು, ವಾರ್ಡ್ ಸದಸ್ಯರು, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ, ಕುಟುಂಬಶ್ರೀ, ಸ್ವಯಂಸೇವಾ ಸಮಘಟನೆಗಳ ಕಾರ್ಯಕರ್ತರ ಸಕ್ರಿಯ ಒಕ್ಕೂಟ ರಚನೆ ಮತ್ತು ಸಭೆ ನಡೆಸಲು ಮಾಸ್ಟರ್ ಯೋಜನೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. 

            ಹೆಚ್ಚುವರಿ ಮೈಕ್ರೋ ಕ್ಲಸ್ಟರ್ ಗಳು 

      ಪ್ರತಿ ವಾರ್ಡ್ ನಲ್ಲಿ 20-30 ಮನೆಗಳನ್ನು ಅಳವಡಿಸಿ ಹಲವು ಮೈಕ್ರೋ ಕ್ಲಸ್ಟರ್ ಆಗಿ ವಿಂಗಡಿಸಿ, ಪ್ರತಿ ಮೈಕ್ರೋ ಕ್ಲಸ್ಟರ್ ಗೂ ತಲಾ ಇಬ್ಬರು ಕೇರ್ ಟೇಕರ್ ಗಳು ಎಂಬ ಗಣನೆಯಲ್ಲಿ ಹೊಣೆ ನೀಡಲು ಸಭೆ ತೀರ್ಮಾನಿಸಿದೆ. ಕೇರ್ ಟೇಕರ್ ಗಳನ್ನು ಜಾಗೃತಿ ಸಮಿತಿಗಳಿಂದ ಆಯ್ಕೆ ಮಾಡಲಾಗುವುದು. ಇವರು ಕ್ವಾರೆಂಟೈನ್ , ಪಾಸಿಟಿವ್ ಆದವರ ಬಗ್ಗೆ ನಿಗಾ ಇರಿಸುವುದು, ದೈಹಿಕ ಅಸ್ವಸ್ಥತೆ ಹೊಂದಿರುವವರನ್ನು ತಪಾಸಣೆ ನಡೆಸುವಂತೆ ಪ್ರೇರೇಪಿಸುವುದು, ಅಗತ್ಯದ ಸಹಾಯ ಒದಗಿಸುವುದು ಇತ್ಯಾದಿ ನಡೆಸುವರು. ಈ ಕೇರ್ ಟೇಕರ್ ಗಳು ಅವರ ಮೈಕ್ರೋ ಕ್ಲಸ್ಟರ್ ಮಟ್ಟದ ಸೈನಮದಿನ ವರದಿಗಳನ್ನು ಆಯಾ ವಾರ್ಡ್ ನ ಹೊಣೆಗಾರಿಕೆಯಿರುವ ಶಿಕ್ಷಕರಿಗೆ ತಿಳಿಸುವರು. ವಾಡ್ರ್ನ ಹೊಣೆಯಿರುವ ಶಿಕ್ಷಕರು ಕೇರ್ ಟೇಕರ್ ಗಳೊಂದಿಗೆ , ಜಾಗೃತಿ ಸಮಿತಿಯೊಂದಿಗೆ ಸತತ ಸಂಪರ್ಕದಲ್ಲಿರುವರು. ವಾಡ್ರ್ನ ದೈನಂದಿನ ಪಾಸಿಟಿವ್ ಕೇಸುಗಳ ಗಣನೆಯನ್ನು ಪಂಚಾಯತ್ ಸಂಚಾಲಕರಿಗೆ ಯಥಾ ಸಮಯದಲ್ಲಿ ನೀಡುವರು. ಪಂಚಾಯತ್ ಸಂಚಾಲಕರಿಗೆ ವಾಡ್ರ್ನ ಎರಡು ವಾರಗಳ ಕೋವಿಡ್ ಪಾಸಿಟಿವ್ ಗ್ರಾಫ್ ಸಿದ್ಧಪಡಿಸಲು , ಅದರ ಪ್ರಕಾರ ಅಗತ್ಯದ ವಾರ್ಡ್ ಗಳಲಿ ಹೆಚ್ಚುವರಿ ಗಮನ ಹರಿಸಲು ಈ ಮೂಲಕ ಸಾಧ್ಯವಾಗಲಿದೆ. 

                  ರಾಪಿಡ್ ಆಕ್ಷನ್ ಫೆÇೀರ್ಸ್ 

          ಪ್ರತಿ ಗ್ರಾಮ ಪಂಚಾಯತ್ ನಲ್ಲೂ ಸ್ವಯಂ ಸಿದ್ಧರಾದ ಯುವಜನರನ್ನು ಅಳವಡಿಸಿ ಒಂದು ರಾಪಿಡ್ ಆಕ್ಷನ್ ಫೆÇೀರ್ಸ್ ರಚಿಸಲಾಗುವುದು. ಎಲ್ಲ ಯಾವಾಗ ಇವಚರ ಅಗತ್ಯ ಬರುತ್ತದೋ ಅಲ್ಲಿ ತಕ್ಷಣ (ಸಿ.ಎಫ್.ಎಲ್.ಟಿ.ಸಿ.ಗಳಲ್ಲಿ, ರಕ್ತದಾನ, ಇತರ ತುರ್ತು ಪರಿಸ್ಥಿತಿಗಳಲ್ಲಿ) ತಲಪಿ ಬೇಕಾದ ಸಹಾಯ ಒದಗಿಸಲಾಗುವುದು. 

               ಟ್ರಾಫಿಕ್ ಮಾಸ್ಟರ್ 

         ಪ್ರತಿ ಪಂಚಾಯತ್ ನಲ್ಲೂ ಜನ ಅಧಿಕ ಪ್ರಮಾಣದಲ್ಲಿ ಸಾಧ್ಯತೆಗಳಿರುವ ಪ್ರಧಾನ ಜಂಕ್ಷನ್ ಗಳಲ್ಲಿ ನಿಗಾ ಇರಿಸುವ ನಿಟ್ಟಿನಲ್ಲಿ ಶಿಕ್ಷಕರಿಗೆ ಹೊಣೆ ನೀಡಲಾಗಿದೆ. ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ತಕ್ಷಣ ದಂಡ ವಸೂಲಿ ನಡೆಸಲು ಉದ್ದೇಶಿಸಲಾಗಿದೆ. 

      ಈ ಚಟುವಟಿಕೆಗಳೊಂದಿಗೆ ಮಾಸ್ಟರ್ ರೇಡಿಯೋ, ಮಾಸ್ಟರ್ ಬಂಡಿ, ಮಾಸ್ಟರ್ ಬುಲೆಟಿನ್ ಇತ್ಯಾದಿ ವಿಭಿನ್ನ ಜನಜಾಗೃತಿ ರೀತಿಗಳನ್ನೂ ನಡೆಸಲಾಗುತ್ತಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries