HEALTH TIPS

ವರ್ಕ್‌ ಫ್ರಂ ಹೋಮ್‌ನಿಂದ ಬೋರ್ ಆಗಿದೆಯೇ? ಕೇರಳದಲ್ಲಿ 'ವರ್ಕ್ ಫ್ರಂ ಹೋಟೆಲ್' ಆರಂಭ

           ತಿರುವನಂತಪುರ: ವರ್ಕ್ ಫ್ರಂ ಹೋಮ್ ಮಾಡಿ ಬೋರ್ ಆದವರಿಗಾಗಿ ಐಆರ್‌ಸಿಟಿಸಿ ಕೇರಳದಲ್ಲಿ ವಿಶೇಷವಾದ 'ವರ್ಕ್ ಫ್ರಂ ಹೋಟೆಲ್' ಪ್ಯಾಕೇಜ್ ಅನ್ನು ಪ್ರಾರಂಭಿಸಿದ್ದು, ವೃತ್ತಿಪರರಿಗೆ ಹೋಟೆಲ್ ಕೊಠಡಿಗಳಲ್ಲಿ 'ರಿಫ್ರೆಶ್ ಮತ್ತು ಹಿತವಾದ ವಾತಾವರಣ'ವನ್ನು ಒದಗಿಸಿದೆ.

         ಕೋವಿಡ್ ನಂತರದ ದಿನಗಳಲ್ಲಿ ಆತಿಥ್ಯ ಸೇವೆಗಳ ಬಗ್ಗೆ ಅತಿಥಿಗಳ ವಿಶ್ವಾಸವನ್ನು ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ರೈಲ್ವೆಯ ಕೇಟರಿಂಗ್ ಮತ್ತು ಪ್ರವಾಸೋದ್ಯಮ ವಿಭಾಗದ ಪ್ರಯತ್ನಗಳ ಒಂದು ಭಾಗವಾಗಿದೆ ಎಂದು ಐಆರ್‌ಸಿಟಿಸಿ ಹೇಳಿಕೆಯಲ್ಲಿ ತಿಳಿಸಿದೆ.

           ಹೋಟೆಲ್‌ನಲ್ಲಿ ಐದು ರಾತ್ರಿ ವಾಸ್ತವ್ಯಕ್ಕಾಗಿ ಟ್ರಿಪಲ್ ಆಕ್ಯುಪೆನ್ಸಿಯಲ್ಲಿರುವ ಪ್ರತಿ ವ್ಯಕ್ತಿಗೆ ಪ್ಯಾಕೇಜ್  10,126 ಗಳಿಂದ ಪ್ರಾರಂಭವಾಗುತ್ತದೆ. ಡಿಸ್‌ಇನ್ಫೆಕ್ಟೇಡ್ ಕೊಠಡಿಗಳು, ಮೂರು ಬಾರಿ ಊಟ, ಎರಡು ಬಾರಿ ಚಹಾ / ಕಾಫಿ, ಕಾಂಪ್ಲಿಮೆಂಟರಿ ವೈ-ಫೈ, ವಾಹನಗಳಿಗೆ ಸುರಕ್ಷಿತ ಪಾರ್ಕಿಂಗ್ ಸ್ಥಳ ಮತ್ತು ಪ್ರಯಾಣ ವಿಮೆಯನ್ನು ಈ ಪ್ಯಾಕೇಜ್ ಒಳಗೊಂಡಿರುತ್ತದೆ.

          'ಸದ್ಯದ ಲಾಕ್‌ಡೌನ್ ಅವಧಿಯಲ್ಲಿ, ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಲಿಮಿಟೆಡ್ (ಐಆರ್‌ಸಿಟಿಸಿ), ವೃತ್ತಿಪರರಿಗೆ ಹೋಟೆಲ್ ಕೊಠಡಿಗಳ ಸೌಕರ್ಯ ನೀಡುವ ಮೂಲಕ ವಿಭಿನ್ನವಾದ ಮತ್ತು ಉಲ್ಲಾಸಕರ ವಾತಾವರಣದೊಂದಿಗೆ ತಮ್ಮ ಕೆಲಸವನ್ನು ಮುಂದುವರಿಸಲು ವಿಶೇಷ ಪ್ಯಾಕೇಜ್‌ಗಳನ್ನು ಪ್ರಾರಂಭಿಸಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

'ಈ ಸಾಂಕ್ರಾಮಿಕ ರೋಗದ ಕಾಲದಲ್ಲಿ ಕಚೇರಿಗಳಿಂದ ದೂರವಿರುವುದು ನ್ಯೂ ನಾರ್ಮಲ್ ಆಗಿದೆ.                    ವೃತ್ತಿಪರರು ಕೇರಳದಲ್ಲಿ ತಮ್ಮ ನೆಚ್ಚಿನ ತಾಣವನ್ನು 'ವರ್ಕ್ ಫ್ರಂ ಹೋಟೆಲ್' ಪರಿಕಲ್ಪನೆಯಡಿಯಲ್ಲಿ ನೀಡಲಾಗುವ ಹೋಟೆಲ್‌ಗಳ ಪಟ್ಟಿಯಲ್ಲಿ ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.

             ಇದರಲ್ಲಿ ಮುನ್ನಾರ್, ತೆಕ್ಕಡಿ, ಕುಮಾರಕೋಮ್, ಮರಾರಿ (ಅಲೆಪ್ಪಿ), ಕೋವಲಂ, ವಯನಾಡ್ ಮತ್ತು ಕೊಚ್ಚಿನ್ ಹೋಟೆಲ್‌ಗಳಿದ್ದು, ವೃತ್ತಿಪರರು ತಮಗೆ ಬೇಕಾದ ಸ್ಥಳದಲ್ಲಿ ಹೋಟೆಲ್ ಆಯ್ಕೆ ಮಾಡಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries