ತಿರುವನಂತಪುರ: ವಿಧಾನಸಭೆ ಚುನಾವಣಾ ಫಲಿತಾಂಶಗಳು ಹೊರಬರಲು ಕೇವಲ ಕೆಲವೇ ಗಂಟೆಗಳು ಬಾಕಿ ಇದ್ದು, ಮುಖ್ಯ ಚುನಾವಣಾ ಅಧಿಕಾರಿ ಟಿಕಾರಂ ಮೀನಾ ಅವರು ಮತ ಎಣಿಕೆಯ ಸಿದ್ಧತೆಗಳನ್ನು ವಿವರಿಸಿದ್ದಾರೆ.
ಈ ಬಾರಿ ಅಂಚೆ ಮತಗಳ ಸಂಖ್ಯೆ ಹೆಚ್ಚಿರುವುದರಿಂದ ಫಲಿತಾಂಶ ತಿಳಿಯಲು ತಡವಾಗಲಿದೆ ಎಂದು ಟಿಕಾರಂ ಮೀನಾ ಹೇಳಿದರು. ರಾತ್ರಿ 10 ಗಂಟೆಯೊಳಗೆ ಆರಂಭಿಕ ಸೂಚನೆಗಳು ಲಭ್ಯವಿರುತ್ತವೆ ಎಂದರು.
ಈ ಬಾರಿ ಟ್ರೆಂಡ್ ಸಾಫ್ಟ್‍ವೇರ್ ಇರುವುದಿಲ್ಲ. ಆದರೆ ನಿಖರ ಫಲಿತಾಂಶವನ್ನು ತ್ವರಿತವಾಗಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತದಾನದ ಬಗ್ಗೆ ಯಾವುದೇ ವಿವಾದಗಳಿಲ್ಲ. ಅಧಿಕಾರಿಗಳಿಗೆ ಸರಿಯಾದ ತರಬೇತಿ ನೀಡಲಾಗಿದೆ ಎಂದು ಟೀಕಾರಂ ಮೀನಾ ಹೇಳಿರುವರು.