ಕಾಸರಗೋಡು: ಕೋವಿಡ್ ಹಿನ್ನೆಲೆಯಲ್ಲಿ ಬ್ಲಡ್ ಬ್ಯಾಂಕುಗಳಲ್ಲಿ ರಕ್ತ ದಾಸ್ತಾನು ಕೊರತೆ ನೀಗಿಸುವ ನಿಟ್ಟಿನಲ್ಲಿ ಸೇವಾಭಾರತಿ ಕಾರ್ಯಾಕರ್ತರು ಕಾಸರಗೋಡು ಜನರಲ್ ಆಸ್ಪತ್ರೆಯ ಬ್ಲಡ್ ಬ್ಯಾಂಕಿಗೆ ರಕ್ತದಾನ ಮಾಡಿದರು. ಸೇವಾಭಾರತಿ ಚೆಮ್ನಾಡ್ ಪಂಚಾಯಿತಿ ಸಮಿತಿ ಹಾಗೂ ಪರವನಡ್ಕ ಯೂನಿಟ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ರಕ್ತದಾನ ಮಾಡಲು 150ಮಂದಿ ಕಾರ್ಯಕರ್ತರು ಮುಂದೆ ಬಂದಿದ್ದು, ಇವರಲ್ಲಿ ಮೊದಲ ತಂಡದ 25ಮಂದಿ ಜನರಲ್ ಆಸ್ಪತ್ರೆಯಲ್ಲಿ ರಕ್ತದಾನ ನಡೆಸಿದರು. ರಾಷ್ಟ್ರೀಯ ಸೇವಾಭಾರತಿಯ ಕಾಸರಗೋಡು ಜಿಲ್ಲಾ ಘಟಕ ಕಾರ್ಯದರ್ಶಿ ಶ್ರೀಧರನ್ ಮಣಿಯಂಗಾನಂ ಶಿಬಿರ ಉದ್ಘಾಟಿಸಿದರು. ಪರವನಡ್ಕ ಯೂನಿಟ್ ಅಧ್ಯಕ್ಷ ನಾರಾಯಣನ್ ಕೈಂದಾರ್, ಮಣಿಕಂಠನ್ ಮಣಿಯಂಗಾನ, ರಾಜೇಶ್ ಕೈಂದಾರ್, ನಾಗೇಶ್ ಜಿ. ಮಧು ಚೆಟ್ಟುಂಗುಯಿ, ಉಣ್ಣಿಕೃಷ್ಣನ್ ಉಪಸ್ಥಿತರಿದ್ದರು.