ನಮ್ಮ ದೈನಂದಿನ ಜೀವನದಲ್ಲಿ ಚಹಾದ ಪಾತ್ರವನ್ನು ಯಾವತ್ತಾದರೂ ಉಲ್ಲೇಖಿಸದಿದ್ದರೆ ಅಪರಾಧವೆನ್ನಲು ಅಡ್ಡಿಯಿಲ್ಲ! ಹೆಚ್ಚಿನ ಜನರು ತಮ್ಮ ದಿನವನ್ನು ಒಂದು ಕಪ್ ಚಹಾದೊಂದಿಗೆ ಪ್ರಾರಂಭಿಸುತ್ತಾರೆ. ನಾವು ಸ್ವಲ್ಪ ಆಲಸ್ಯ, ದಣಿದ ಅಥವಾ ನಿರಾಶೆ ಅನುಭವಿಸಿದರೂ, ನಾವು ಮೊದಲು ಚಹಾವನ್ನು ಅವಲಂಬಿಸುತ್ತೇವೆ. ಕೇವಲ ಪಾನೀಯಕ್ಕಿಂತ ಹೆಚ್ಚು ಚಹಾವನ್ನು ಸಂಸ್ಕøತಿಯ ಭಾಗವಾಗಿ ನೋಡಲಾಗುತ್ತಿದೆ. ಮತ್ತದು ಮಾದಕತೆಯೊಂದಿಗೆ ಬೆಚ್ಚನೆಯ, ಸಹವರ್ತಿಯಾಗಿ ಯಾರೋ ಒಬ್ಬರು ಇರುವಂತ ವಾತಾವರಣ ನಿರ್ಮಿಸುತ್ತದೆ. ಅಲ್ಲವೆನ್ನುತ್ತೀರಾ? ಬನ್ನಿ...ಒಂದಷ್ಟು ಚಹಾ ಸೇವಿಸುತ್ತಾ ಮಾತೋಡೋಣ!
ಚಹಾ ಹಾನಿ ಎನ್ನುವವರಿಗೆ.......ಮಧ್ಯಮ ಪ್ರಮಾಣದಲ್ಲಿ ಮಿತಿಗೊಳಪಟ್ಟು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿ ಇರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಈ ಎಲ್ಲ ವಿಷಯಗಳ ಬಗ್ಗೆ ನೀವು ಗಮನ ಹರಿಸಿದರೆ ಚಹಾದಿಂದ ಅಗಲಿ ಬದುಕಲು ನಿಮ್ಮಿಂದ ಸಾಧ್ಯವಾಗದು.
ಚಹಾಕ್ಕೆ ಹಾಲು ಸೇರಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವಾದಿಸುವವರೂ ಇದ್ದಾರೆ. ಅದೇ ರೀತಿ, ಹಾಲನ್ನು ಸೇರಿಸುವುದರಿಂದ ಚಹಾದ ನೈಜ ರುಚಿ, ಪ್ರಯೋಜನಗಳನ್ನು ಕಳೆದುಕೊಳ್ಳಬಹುದು ಎಂದು ಕೆಲವರು ವಾದಿಸುತ್ತಾರೆ.
ಈ ಎರಡೂ ವಾದಗಳು ನಿಜವಲ್ಲ. ಹಾಲನ್ನು ಸೇರಿಸುವುದರಿಂದ ಚಹಾದ ರುಚಿ ಮತ್ತು ಪ್ರಯೋಜನಗಳನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಹಾಲಿನೊಂದಿಗೆ ಚಹಾ ಕುಡಿಯುವುದು ಆರೋಗ್ಯಕ್ಕೆ ಸವಾಲಲ್ಲ. ಆದರೆ ಯಾವಾಗಲೂ ಚಹಾವನ್ನು ಅತಿಯಾಗಿ ಸೇವಿಸದಂತೆ ಜಾಗರೂಕರಾಗಿರಬೇಕೆಂಬುದೂ ಸತ್ಯ.
ಚಹಾ ಹುಡಿಗೆ ಅಂತಿಮ ದಿನಾಂಕ(ಎಕ್ಸ್ ಫಯರೀ ಡೇಟ್)ಇಲ್ಲ, ಅಥವಾ ಚಹಾ ಸುರಕ್ಷಿತವಾಗಿದೆ ಎಂದು ಅನೇಕ ಜನರು ನಂಬುತ್ತಾರೆ. ಅದು ನಿಜವಲ್ಲ. ಸ್ವಲ್ಪ ಕಾಲದ ನಂತರ ಚಾಹುಡಿ ಕೂಡ ಕೆಟ್ಟದಾಗುತ್ತದೆ. ಮತ್ತು ಸ್ವಚ್ಚವಾಗಿರಿಸದಿದ್ದರೆ ಹಾಳಾಗುತ್ತದೆ. ಚಹಾದ ನೈಸರ್ಗಿಕ ವಾಸನೆಯು ವಿಭಿನ್ನ ವಾಸನೆಯನ್ನು ಹೊಂದಿದ್ದರೆ, ಚಹಾ ಕೆಟ್ಟದ್ದಾಗಿದೆ ಎಂದು ನೀವು ಗುರುತಿಸಬಹುದು.
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವ ಜನರು ಹಸಿರು ಚಹಾ(ಗ್ರೀನ್ ಟಿ)ವನ್ನು ಹೆಚ್ಚು ಇಷ್ಟಪಡುತ್ತಾರೆ. ಆಹಾರ ಮತ್ತು ವ್ಯಾಯಾಮದಂತಹ ಇತರ ಚಟುವಟಿಕೆಗಳು ಸಹ ಅಗತ್ಯ.
ಮತ್ತಷ್ಟು ಮುಂದಿನ ಸಂಚಿಕೆಯಲ್ಲಿ ಮಾತಾಡೋಣ....ಏನಂತೀರಿ.......ಹಾ...ಚಹಾ ಕುಡೀರಿ...ಆಯ್ತಾ