HEALTH TIPS

ಕಪ್ಪು, ಬಿಳಿಗಿಂತಲೂ ಅಪಾಯಕಾರಿಯಾದ ಹಳದಿ ಶಿಲೀಂಧ್ರ ಪತ್ತೆ: ಇದರ ಗುಣಲಕ್ಷಣಗಳೇನು?

           ದೆಹಲಿ: ಕೊರೊನಾ ವೈರಸ್‌ನ ಹಲವು ಬಗೆಯ ರೂಪಾಂತರಿ ತಳಿಗಳು ಪತ್ತೆಯಾಗುತ್ತಿರುವ ಮಧ್ಯೆಯೇ, ಈಗ ದಿನಕ್ಕೊಂದು ಬಣ್ಣದ ಶಿಲೀಂಧ್ರಗಳು ಪತ್ತೆಯಾಗುತ್ತಿವೆ. ಈ ಬೆಳವಣಿಗೆ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸುತ್ತಿವೆ.

        ಭಾರತದಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಹಳದಿ ಶಿಲೀಂಧ್ರ ಸೋಂಕು ಕಾಣಿಸಿಕೊಂಡಿದೆ. ರೋಗಿಯು ಗಾಜಿಯಾಬಾದ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಳದಿ ಶಿಲೀಂಧ್ರ ಸೋಂಕು ಕಪ್ಪು ಮತ್ತು ಬಿಳಿ ಶಿಲೀಂಧ್ರಗಳಿಗಿಂತಲೂ ಹೆಚ್ಚು ಅಪಾಯಕಾರಿ ಎಂಬುದು ತಿಳಿದು ಬಂದಿದೆ.

        ಗಂಭೀರ ಪ್ರಕರಣಗಳಲ್ಲಿ ಹಳದಿ ಶಿಲೀಂಧ್ರ ಸೋಂಕಿನಿಂದ ಕೀವು ಒಸರುವುದು ಮತ್ತು ದೇಹದ ಮೇಲಿನ ಗಾಯಗಳು ಗುಣವಾಗದಿರುವುದು, ಎಲ್ಲ ಬಗೆಯ ಗಾಯಗಳು ನಿಧಾನವಾಗಿ ಗುಣವಾಗುವುದು, ಜೀರ್ಣವಾಗದಿರುವುದು, ಅಂಗಾಂಗಗಳು ಕೆಲಸ ಮಾಡದಿರುವುದು ಮತ್ತು ಜೀವಕೋಶಗಳ ನಾಶದಿಂದ ಕಣ್ಣುಗಳಲ್ಲಿ ಗುಂಡಿ ಬೀಳುವುದು ಮುಂತಾದ ಸಮಸ್ಯೆಗಳು ಕಂಡುಬರುತ್ತವೆ.

              ರೋಗನಿರೋಧಕ ಶಕ್ತಿಯ ಕೊರತೆಯುಳ್ಳವರು ಹೆಚ್ಚು ಎಚ್ಚರಿಕೆ ವಹಿಸಬೇಕು. ಹಳದಿ ಶಿಲೀಂಧ್ರ ಸೋಂಕಿನ ಗುಣಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಸಕ್ಕರೆ ಕಾಯಿಲೆ, ಕ್ಯಾನ್ಸರ್ ಮತ್ತು ಸೋಂಕು ರೋಗಗಳನ್ನು ಹೊಂದಿದವರು ಕಪ್ಪು, ಬಿಳಿ ಮತ್ತು ಹೊಸದಾಗಿ ಕಾಣಿಸಿಕೊಂಡಿರುವ ಹಳದಿ ಶಿಲೀಂಧ್ರ ಸೋಂಕಿನ ಗುಣಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

ಗುಣಲಕ್ಷಣಗಳು

- ಆಲಸ್ಯ
- ರುಚಿ ಸಿಗದಿರುವುದು
- ಹಸಿವೆಯಾಗದಿರುವುದು
- ತೂಕ ಕಳೆದುಕೊಳ್ಳುವುದು

ಪರಿಣಾಮಗಳು

- ದೇಹದ ಗಾಯಗಳಲ್ಲಿ ಕೀವು ಒಸರುವಿಕೆ
- ಬಾಹ್ಯ ಗಾಯಗಳು ಗುಣವಾಗದಿರುವುದು
- ಎಲ್ಲ ಬಗೆಯ ಗಾಯಗಳು ಗುಣವಾಗುವ ಪ್ರಕ್ರಿಯೆ ನಿಧಾನವಾಗುವುದು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries