ಕಾಸರಗೋಡು: ವಿಧಾನಸಭೆ ಚುನಾವಣೆಯ ಮತಗಣನೆ ಸಿದ್ಧತೆಗಳ ಖಚಿತತೆ ಸಂಬಂಧ ಚುನಾವಣೆ ಆಯೋಗ ನೇಮಿಸಿರುವ ಜನರಲ್ ಒಬ್ಸರ್ ವರ್ ಗಳ ಸಮಕ್ಷದಲ್ಲಿ ಚುನಾವಣೆ ಅಧಿಕಾರಿಗಳ ಸಭೆ ಶನಿವಾರ ಜರುಗಿತು.
ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸಿಕೊಂಡು ಜರುಗಿದ ಸಭೆಯಲ್ಲಿ ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಜಿಲ್ಲೆಯ ಮತಗಣನೆ ಕೇಂದ್ರಗಳಲ್ಲಿ ಕ್ರಮಬದ್ಧವಾದ ಸಜ್ಜೀಕರಣ ನಡೆದಿರುವ ಬಗ್ಗೆ ಜನರಲ್ ಒಬ್ಸರ್ವರ್ ಸಂತೃಪ್ತಿ ವ್ಯಕ್ತಪಡಿಸಿದರು. ಚುನಾವಣೆ ಆಯೋಗ ಪ್ರಕಟಿಸಿರುವ ಎಲ್ಲ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಮತಗಣನೆ ನಡೆಯಬೇಕು ಎಂದು ಅವರು ತಿಳಿಸಿದರು.
ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಹೊಣೆಗಾರಿಕೆಯಿರುವ ನಿರೀಕ್ಷಕ ಪಿ.ರತ್ತಿನಸ್ವಾಮಿ, ತ್ರಿಕರಿಪುರ ವಿಧಾನಸಭೆ ಕ್ಷೇತ್ರದ ಹೊಣೆಗಾರಿಕೆಯಿರುವ ನಿರೀಕ್ಷಕ ಲಕ್ಷ್ಮಮ್ಮ ಪಿ., ಕಾಸರಗೋಡು ವಿಧಾನಸಭೆ ಕ್ಷೇತ್ರದ ಹೊಣೆಗಾರಿಕೆಯಿರುವ ನಿರೀಕ್ಷಕ ಶಿಂದೆ ಅಣ್ಣಾ ಸಾಹೆಬ್, ಕಾಞಂಗಾಡ್ ವಿಧಾನಸಭೆ ಕ್ಷೇತ್ರದ ಹೊಣೆಗಾರಿಕೆಯಿರುವ ನಿರೀಕ್ಷಕ ಎಚ್.ರಾಜೇಶ್ ಪ್ರಸಾದ್, ಉದುಮಾ ವಿಧಾನಸಭೆ ಕ್ಷೇತ್ರದ ಹೊಣೆಗಾರಿಕೆಯಿರುವ ನಿರೀಕ್ಷಕ ಜಯಜೋಸ್ ರಾಜ್ ವಿಷಯಗಳ ಅವಲೋಕನ ನಡೆಸಿದರು.
ಮತಗಣನೆ ಕೇಂದ್ರಗಳಿಗೆ ಪ್ರವೇಶ ಮಾಡುವವರು ಡಬ್ಬಲ್ ಮಾಸ್ಕ್ ಧರಿಸಬೇಕು. ಆರ್.ಟಿ.ಪಿ.ಸಿ.ಆರ್. ಕವಿಡ್ ನೆಗೆಟಿವ್ ಸರ್ಟಿಫೀಕೆಟ್ ಯಾ ಎರಡು ಡೋಸ್ ಕೋವಿಡ್ ವಾಕ್ಸಿನ್ ಸ್ವೀಕಾರ ಮಾಡಿರುವ ಸರ್ಟಿಫಿಕೆಟ್ ಹೊಂದಿರಬೇಕು ಎಂದು ತಿಳಿಸಲಾಗಿದೆ.
ಕಾಞಂಗಾಡು ವಿಧಾನಸಭೆ ಕ್ಷೇತ್ರದ ಚುನಾವಣೆ ಅಧಿಕಾರಿ ಡಿ.ಆರ್.ಮೇಘಶ್ರೀ, ಕಾಸರಗೋಡು ವಿಧಾನಸಭೆ ಕ್ಷೇತ್ರದ ಚುನಾವಣೆ ಅಧಿಕಾರಿ ಅತುಲ್ ಸ್ವಾಮಿನಾಥ್, ಉದುಮಾ ವಿಧಾನಸಭೆ ಕ್ಷೇತ್ರದ ಚುನಬಾವಣೆ ಅಧಿಕಾರಿ ಜಯಜೋಸ್ ರಾಜ್, ತ್ರಿಕರಿಪುರ ವಿಧಾನಸಭೆ ಕ್ಷೇತ್ರದ ಚುನಾವಣೆ ಅಧಿಕಾರಿ ಸಿರೋಜ್ ಪಿ.ಜಾನ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವ್, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಸೈಮನ್ ಫ್ರಾನ್ಸಿಸ್ ಮೊದಲಾದವರು ಉಪಸ್ಥಿತರಿದ್ದರು.