ನವದೆಹಲಿ: ಪ್ರಮುಖ ಔಷಧ ಉತ್ಪಾದಕ ಸಂಸ್ಥೆ ಡಾ.ರೆಡ್ಡೀಸ್ ಲ್ಯಾಬೊರೇಟರಿಸ್ ಸಂಸ್ಥೆಯು ಕೋವಿಡ್ ರೋಗಿಗಳಿಗೆ ಪರ್ಯಾಯ ಚಿಕಿತ್ಸಾ ಕ್ರಮವನ್ನು ಅಭಿವೃದ್ಧಿಪಡಿಸುತ್ತಿದೆ. ಕೆಲವೇ ತಿಂಗಳಲ್ಲಿ ಬಿಡುಗಡೆ ಮಾಡುವ ವಿಶ್ವಾಸವನ್ನೂ ಹೊಂದಿದೆ.
ಸಾಂಕ್ರಾಮಿಕ ರೋಗ ಚಿಕಿತ್ಸೆಗಾಗಿ ಸಂಸ್ಥೆಯ ವಿವಿಧ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಅನಿಯಮಿತವಾಗಿ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.
ಹೈದರಾಬಾದ್ ಮೂಲಕ ಸಂಸ್ಥೆಯು ಈಗಾಗಲೇ 'ಸ್ಪುಟ್ನಿಕ್ ವಿ' ಲಸಿಕೆ ಉತ್ಪಾದನೆಗೆ ಸಂಬಂಧಿಸಿದಂತೆ ದೇಶದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸೇರಿ ವಿವಿಧ ಸಂಸ್ಥೆಗಳ ಜೊತೆಗೆ ಸಹಭಾಗಿತ್ವವನ್ನು ಹೊಂದಿದೆ.
ಹೊಸ ಕೋವಿಡ್‌ಗೆ ಹೊಸ, ಪರ್ಯಾಯ ಚಿಕಿತ್ಸಾ ಕ್ರಮ ಕುರಿತೂ ಚಿಂತನೆ ನಡೆಸಿದ್ದೇವೆ. ನಾವು ವಿವಿಧ ಸಹಭಾಗಿತ್ವ ಹೊಂದಿದ್ದು, ಕೋವಿಡ್‌ಗೆ ನೂತನ ಚಿಕಿತ್ಸಾ ಕ್ರಮಗಳ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದ್ದೇವೆ' ಎಂದು ಕಂಪನಿಯ ಸಹ ಅಧ್ಯಕ್ಷ ಮತ್ತು ವ್ಯವಸ್ಥಾಪ ನಿರ್ದೇಶಕ ಜಿ.ಪಿ.ಪ್ರಸಾದ್ ಅವರು ತಿಳಿಸಿದರು.