ಬೆಂಗಳೂರು: ಟ್ರಾನ್ಸೆಲ್ ಆಂಕೊಲೊಜಿಕ್ಸ್ ಸಹಭಾಗಿತ್ವದಲ್ಲಿ ವರ್ಧಿತ ಬುದ್ದಿಮತ್ತೆ (Augmented Intelligence) ಉಪಯೋಗಿಸಿಕೊಂಡು 'ಲಸಿಕೆ ಸುರಕ್ಷತಾ ಮೌಲ್ಯಮಾಪನ' ಮಾಡಲು ನಿರ್ಧರಿಸಿರುವುದಾಗಿ ಪ್ರಸಿದ್ಧ ಐಟಿ ಕಂಪನಿ ವಿಪ್ರೊ ಪ್ರಕಟಿಸಿದೆ.
ಈ ಸಹಭಾಗಿತ್ವದಲ್ಲಿ ಟ್ರಾನ್‌ಸೆಲ್ಸ್‌ನ ಸ್ಟೆಮ್ ಸೆಲ್ ಟೆಕ್ನಾಲಜಿಯನ್ನು ವಿಪ್ರೊ ಕಂಪನಿಯ 'ಹೊಲ್ಮೆಸ್' ಎಐ ಸಾಮರ್ಥ್ಯದೊಂದಿಗೆ ಸಂಯೋಜಿಸಲಾಗಿದೆ. ಈ ಮೂಲಕ 'ಜಾಗತಿಕ ಲಸಿಕೆ ರೋಗನಿರೋಧಕ ಕಾರ್ಯಕ್ರಮಗಳ' ಸುರಕ್ಷತೆಯನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ' ಎಂದು ಐಟಿ ದಿಗ್ಗಜ ವಿಪ್ರೊ ಕಂಪನಿ ತಿಳಿಸಿದೆ.
' ಲಸಿಕೆ ಅಭಿವೃದ್ಧಿ ಪ್ರಕ್ರಿಯೆಗೆ ಎಐ ಅನ್ವಯಿಸುವ ಈ ತಂತ್ರಜ್ಞಾನ, ಲಸಿಕೆಗಳಿಂದ ನರವ್ಯೂಹದ ಮೇಲೆ( ನ್ಯೂರೊವೈರುಲೆಂಟ್) ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ಊಹಿಸಲು ಸಾಧ್ಯವಾಗುತ್ತದೆ' ಎಂದು ಬೆಂಗಳೂರಿನ ವಿಪ್ರೊ ಪ್ರಧಾನ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಸ್ತುತ ಲಸಿಕೆಯ ಸುರಕ್ಷತೆಯನ್ನು ಅಳೆಯುವ ಅಥವಾ ಮೌಲ್ಯಮಾಪನ ಪ್ರಕ್ರಿಯೆ ಪ್ರಾಣಿಗಳ ಮೇಲೆ ನಡೆಸಿ ಮಾಡಲಾಗುತ್ತಿದೆ.