ಪುದುಚೇರಿಯಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಗದ್ದುಗೆಗೆ ಸನಿಹದಲ್ಲಿದೆ. ಕೇವಲ 30 ಕ್ಷೇತ್ರಗಳಿರುವ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಬಿಜೆಪಿ ಮೈತ್ರಿಕೂಟ ಮುನ್ನಡೆಯಲ್ಲಿದೆ.
ಪುದುಚೇರಿಯಲ್ಲಿ ಬಿಜೆಪಿಯು ಸ್ಥಳೀಯ ಪಕ್ಷ ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಜೊತೆಗೆ ಎಐಎಡಿಎಂಕೆ ಪಕ್ಷವೂ ಮೈತ್ರಿಯಲ್ಲಿದೆ.
ಈವರೆಗಿನ ಫಲಿತಾಂಶದ ಪ್ರಕಾರ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಎನ್‌ಡಿಎ ಮೈತ್ರಿಕೂಟ ಎರಡರಲ್ಲಿ ಮುನ್ನಡೆಯಲ್ಲಿದೆ. ಆದರೆ ಬಿಜೆಪಿಗಿಂತಲೂ ಸ್ಥಳೀಯ ಪಕ್ಷವಾದ ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಗೆದ್ದಿದೆ.
ಇನ್ನು ಕಾಂಗ್ರೆಸ್ ಪಕ್ಷವು ಡಿಎಂಕೆ, ಸಿಪಿಐ ಹಾಗೂ ವಿಸಿಕೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಈವರೆಗೆ ಒಂದು ಸ್ಥಾನದಲ್ಲಿ ಗೆದ್ದು ಎರಡು ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಈವರೆಗೆ 12 ಕ್ಷೇತ್ರಗಳದ್ದಷ್ಟೆ ಸ್ಪಷ್ಟ ಚಿತ್ರಣ ಸಿಕ್ಕಿದ್ದು ಎನ್‌ಡಿಎ ಮೈತ್ರಿಕೂಟ ಬಹುಮತ ಪಡೆಯುತ್ತಿರುವುದಾಗಿ ಹೇಳಲಾಗುತ್ತಿದೆ.
ಪುದುಚೇರಿಯಲ್ಲಿ ಬಿಜೆಪಿಯು 9 ಸ್ಥಾನಗಳಲ್ಲಿ, ಕಾಂಗ್ರೆಸ್ 14 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಡಿಎಂಕೆ 13, ಎಐಎನ್‌ಆರ್‌ಸಿ 16 ಸ್ಥಾನಗಳಲ್ಲಿ ಸ್ಪರ್ಧಿಸಿದೆ.