ಕಾಸರಗೋಡು: ಕೋವಿಡ್ 19 ಹೆಚ್ಚಳದ ಹಿನ್ನೆಲೆಯಲ್ಲಿ ವಿಶೇಷ ಚೇತನ ಮಕ್ಕಳ ಮುಂದುವರಿಯುವ ತರಬೇತಿ ಮತ್ತು ಜಾಗ್ರತೆ ಖಚಿತಪಡಿಸುವ ನಿಟ್ಟಿನಲ್ಲಿ ಮನೆಗಳಲ್ಲಿ ಉಳಿದುಕೊಂಡಿರುವ ವಿಶೇಷಚೇತನರಿಗಾಗಿ ಕಾಸರಗೋಡು ಜಿಲ್ಲಾಡಳಿತೆ ಮತ್ತು ಸಮಾಜ ನೀತಿ ಇಲಾಖೆ ಅಕ್ಕರ ಫೌಂಡೇಶನ್ ಸಂಸ್ಥೆಯೊಂದಿಗೆ ಕೈಜೋಡಿಸಿ ಟೆಲಿ ರಿಹಾಬಿಲಿಟೇಷನ್ ಸೌಲಭ್ಯ ಆರಂಭಿಸಲಿದೆ. ವಿಶೇಷಚೇತನರ ವಲಯದಲ್ಲಿ ಚಟುವಟಿಕೆ ನಡೆಸುತ್ತಿರುವ ಫಿಝಿಯೋಥೆರಪಿಸ್ಟ್, ಸ್ಪೀಚ್ ಥೆರಪಿಸ್ಟ್, ಒಕ್ಯೂಪೇಷನ್ ಥೆರಪಿಸ್ಟ್, ಸೈಕಾಲಜಿಸ್ಟ್ , ಸೋಷ್ಯಲ್ ಎಜ್ಯುಕೇಟರ್, ಸೋಷ್ಯಲ್ ವರ್ಕರ್ ಎಂಬ ಪೆÇ್ರಫೆಷನಲ್ ಗಳನ್ನು ಅಳವಡಿಸಿ ಮಕ್ಕಳ ವಿಶೇಷಚೇತನತೆ, ವಯೋಮತಿ, ಅಗತ್ಯ ಇತ್ಯಾದಿಗಳ ಹಿನ್ನೆಲೆಯಲ್ಲಿ ಮನೆಯಲ್ಲೇ ನಡೆಸಬಹುದಾದ ಕಟ್ಟುನಿಟ್ಟುಗಳನ್ನು ಮೊದಲ ಹಂತದಲ್ಲಿ ತಿಳಿಸಲಾಗುವುದು. ತದನಂತರ ಅವರಿಗೆ ಅಗತ್ಯವಿರುವ ವರ್ಕ್ ಶೀಟ್, ಡೆಮೋ ವಿಡಿಯೋ, , ಆನ್ ಲೈನ್ ಥೆರಪಿ ಇತ್ಯಾದಿ ನೀಡಲಾಗುವುದು. ಹೆಚ್ಚುವರಿ ಮಾಹಿತಿಗಾಗಿ ಮತ್ತು ನೋಂದಣಿಗಾಗಿ ದೂರವಾಣಿ ಸಂಖ್ಯೆಗಳು: 9188666403, 989582606.