ಮುಂಬೈ: ತಾಕ್ಟೇ ಚಂಡಮಾರುತದಿಂದ ಅರಬ್ಬಿ ಸಮುದ್ರದಲ್ಲಿ ಉಂಟಾದ ಭಾರೀ ಅಲೆಗಳು ಗೇಟ್ ವೇ ಆಫ್ ಇಂಡಿಯಾಗೆ ಅಪ್ಪಳಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರೋಸಿ ಎಂಬುವರು ತಮ್ಮ ಟ್ವೀಟ್ ಖಾತೆಯಲ್ಲಿ ಗೇಟ್ ವೇ ಆಫ್ ಇಂಡಿಯಾದ ಗೋಡೆಗಳಿಗೆ ಅಲೆಗಳು ಅಪ್ಪಳಿಸುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋವನ್ನು ಗೇಟ್ ವೇ ಆಫ್ ಇಂಡಿಯಾದ ಪಕ್ಕದಲ್ಲಿರುವ ತಾಜ್ ಮಹಲ್ ಹೋಟೆಲ್ ನಿಂದ ಸೆರೆ ಹಿಡಿಯಲಾಗಿದೆ.
ತೌಕ್ಟೇ ಚಂಡಮಾರುತ ಮುಂಬೈ ಕರಾವಳಿ ಸಮೀಪದ ಹೋದು ಹೋಗಿದ್ದು ಮುಂಬೈನಲ್ಲಿ 114 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ ಎಂದು ನಾಗರಿಕ ಅಧಿಕಾರಿಗಳು ತಿಳಿಸಿದ್ದಾರೆ.