ನವದೆಹಲಿ: 'ಕೃಷಿ ತ್ಯಾಜ್ಯ ಸುಡುವಿಕೆಯಿಂದ ಉಂಟಾಗುವ ಮಾಲಿನ್ಯ ಹಾಗೂ ಇಂಗಾಲ ಹೊರಸೂಸುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಬಯೋಮಾಸ್ ಬಳಕೆ ಕುರಿತು ರಾಷ್ಟ್ರೀಯ ಮಿಷನ್ ಸ್ಥಾಪಿಸಲು ನಿರ್ಧರಿಸಲಾಗಿದೆ' ವಿದ್ಯುತ್ ಸಚಿವಾಲಯವು ಮಂಗಳವಾರ ತಿಳಿಸಿದೆ.
'ಇದು ಇಂಧನ ಪರಿವರ್ತನೆ ಮತ್ತು ಶುದ್ಧ ಇಂಧನ ಸಂಪನ್ಮೂಲಗಳ ಬಳಕೆಗೆ ಇನ್ನಷ್ಟು ಬೆಂಬಲ ನೀಡಲಿದೆ' ಎಂದು ಸಚಿವಾಲಯವು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.