ಅಂಬಲಪುಳ: ಸೈಕಲ್ ಮೂಲಕ ಮನೆಯಿಂದ ಹೊರತೆರಳಿ ರಸ್ತೆಯಲ್ಲಿ ಓಡಾಡುತ್ತಿದ್ದ ವಯೋವೃದ್ದರೋರ್ವರ ಕಾಲಿ ಹಿಡಿದು ಅಪೇಕ್ಷಿಸುವ ಚಿತ್ರವೊಂದು ನಿನ್ನೆ ಕೇರಳದಾತ್ಯಂತ ಸಂಚಲನ ಸೃಷ್ಟಿಸಿತು. ಕೊರೊನಾ ವ್ಯಾಪಕತೆ ಮತ್ತು ನಿಯಂತ್ರಣಗಳನ್ನು ಕಠಿಣಗೊಳ್ಳುತ್ತಿರುವಂತೆ ಪೋಲೀಸರಿಗೆ ಎದುರಾಗಿ ಹಲವು ಚರ್ಚೆಗಳು ಹುಟ್ಟಿಕೊಳ್ಳುತ್ತಿವೆ. ಈ ಮಧ್ಯೆ ಈ ಚಿತ್ರವೊಂದು ವೈರಲ್ ಆಗಿ ಗಮನ ಸೆಳೆಯಿತು.
ತೊಟ್ಟಪಲ್ಲಿ ಕರಾವಳಿ ಪೋಲೀಸ್ ಠಾಣೆ ಎಸ್.ಐ.ವಿ.ಕಮಲನ್ ಅವರು ವಯೋವೃದ್ದರೋರ್ವರ ಕಾಲು ಹಿಡಿದು (ದೈನ್ಯರಾಗಿ)ಮನವಿ ಮಾಡುವ ಚಿತ್ರ ಗಮನ ಸೆಳೆದಿದೆ. ದೈನಂದಿನ ಗಸ್ತಿನ ಮಧ್ಯೆ ತೋಟ್ಟಪ್ಪಳ್ಳಿ ಒಟ್ಟಪ್ಪನ ಸಮೀಪ ವಯೋವೃದ್ದರ ತಂಡ ಗುಂಪು ಸೇರಿರುವುದನ್ನು ಎಸ್.ಐ.ಗಮನಿಸಿದರು. ಪೋಲೀಸರನ್ನು ಗಮನಿಸಿದೊಡನೆ ಅಲ್ಲಿದ್ದ ಸ್ಥಳೀಯ ವಯೋವೃದ್ದರು ಅವರವರ ಮನೆಗಳಿಗೆ ಕಾಲ್ಕಿತ್ತರು.
ಅವರಲ್ಲಿ ಸೈಕಲ್‍ನಲ್ಲಿ ಮಾತನಾಡುತ್ತಿದ್ದ ವಯೋವೃದ್ದರೋರ್ವರು ಗತ್ಯಂತರವಿಲ್ಲದೆ ನಿಂತಿದ್ದು, ಅವರಲ್ಲಿ ಎಸ್.ಐ. ಮನೆಯಿಂದ ಹೊರಗೇಕೆ ಬಂದಿರಿ ಎಂದು ಪ್ರಶ್ನಿಸಿದಾಗ ನೆಲನೋಟಕರಾದರು. ಬಳಿಕ ಎಸ್.ಐ ಕೊರೊನಾ ಸೋಂಕಿನ ಭೀಕರತೆ, ಮತ್ತು ವಯೋವೃದ್ದರ ಸಹಿತ ಇತರ ರೋಗಗಳಿರುವವರಲ್ಲಿ ಸೋಂಕಿನ ಪ್ರಭಾವದ ಬಗ್ಗೆ ಮನವರಿಕೆ ಮಾಡಿದರು. ಇನ್ನಾದರೂ ಅನಾವಶ್ಯಕವಾಗಿ ಮನೆಯಿಂದ ಹೊರ ಬಾರದಂತೆ ತಿಳಿಸಿ ಕಾಲು ಹಿಡಿದು ಬೇಡಿಕೊಂಡರು. ಜೊತೆಗಿದ್ದ ಇತರ ಪೋಲೀಸ್ ಸಿಬ್ಬಂದಿಗಳು ಈ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದು, ಈ ಚಿತ್ರ ಮನೋಜ್ಞವಾಗಿ ವೈರಲ್ ಆಗಲು ಕಾರಣವಾಯಿತು.