ಕುಂಬಳೆ: ಕೊರೊನ ಮಹಾಮಾರಿ ಯಿಂದ ಮಂಜೇಶ್ವರದ ಜನತೆಗೆ ರಕ್ಷಣೆ ನೀಡಬೇಕು ಹಾಗೂ ಲಭ್ಯವಿರುವ ಖಾಸಗಿ ಆಸ್ಪತ್ರೆಗಳನ್ನು ಸೇರಿಸಿ ಒಕ್ಸಿಜನ್ ವ್ಯವಸ್ಥೆ ಸÀರ್ಕಾರ ಮಂಜೇಶ್ವರ ತಾಲೂಕಿನಲ್ಲಿ ಮಾಡಿಕೊಡಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆಗ್ರಹಿಸಿದೆ.
ಮಂಜೇಶ್ವರ ತಾಲೂಕ ವ್ಯಾಪ್ತಿಯಲ್ಲಿ ಒಂದೇ ಒಂದು ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಲಿಲ್ಲ, ಮೆಡಿಕಲ್ ಕಾಲೇಜ್ ಗಳಿಲ್ಲ, ಒಕ್ಸಿಜನ್ ಪ್ಲಾಂಟ್ ಇಲ್ಲವೇ ಇಲ್ಲ. ಪ್ರಸ್ತುತ ಮಂಜೇಶ್ವರದ ಶಾಸಕರು ಕೋವಿಡ್ ಬಾಧಿತರಾಗಿ ಮಂಗಳೂರಿನ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಾಸಕರೆ ಕರ್ನಾಟಕ ವನ್ನು ಆಶ್ರಯಿಸಿ ಇರುವಾಗ ಜನ ಸಾಮಾನ್ಯರ ಸ್ಥಿತಿ ಏನು,ಬಡವರು ಮಂಗಳೂರು ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವೇ ಆದುದರಿಂದ ಕೂಡಲೇ ಮಂಜೇಶ್ವರದ ತಾಲೂಕು ವ್ಯಾಪ್ತಿಯಲ್ಲಿ ಕೋವಿಡ್ ಸೆಂಟರ್ ಅರಂಭಿಸಬೇಕೆಂದು ಬಿಜೆಪಿ ಅಗ್ರಹಿಸಿದೆ.
ಕೋವಿಡ್ ಲಸಿಕೆ ನೋಂದಣಿ ಕೇರಳ ದಲ್ಲಿ ಆಗುತ್ತಿಲ್ಲ. ಉದ್ದೇಶ ಪೂರ್ವಕವಾಗಿ ರಾಜ್ಯ ಸರ್ಕಾರ ದಾಖಲಾತಿ ಅದವರಿಗೆ ದಿನಾಂಕ ಹಾಗೂ ಸಮಯ ಸೂಚಿಸುತ್ತಿಲ್ಲ .ಇದು ಬೇಜವಾಬ್ದಾರಿ ಎಂದು ಬಿಜೆಪಿ ದೂರಿದೆ. ಕೂಡಲೇ 18 ವರ್ಷ ಮೆಲ್ಪಟ್ಟ ವರಿಗೆ ಲಸಿಕೆ ಆರಂಭಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.
ಆನ್ ಲೈನ್ ಮೂಲಕ ನಡೆದ ಬಿಜೆಪಿ ಮಂಜೇಶ್ವರ ಮಂಡಲ ಸಭೆಯನ್ನು ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಉದ್ಘಾಟಿಸಿ ಮಾತನಾಡಿದರು. ಮಂಡಲ ಅಧ್ಯಕ್ಷ ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ನ್ಯಾಯವಾದಿ.ಕೆ. ಶ್ರೀಕಾಂತ್, ಬಾಲಕೃಷ್ಣ ಶೆಟ್ಟಿ, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ರೂಪವಾಣಿ ಆರ್.ಭಟ್, ಎ.P.É ಕಯ್ಯಾರ್, ವಿಜಯ್ ರೈ, ಹಾಗೂ ಬಿಜೆಪಿ ಪಂಚಾಯತಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಆದರ್ಶ್ ಬಿಎಂ ಸ್ವಾಗತಿಸಿ, ಮುರಳಿದರ್ ಯಾದವ್ ವಂದಿಸಿದರು.