ಬೀಜಿಂಗ್: ಬ್ರಹ್ಮಪುತ್ರ ಕಣಿವೆಯ ಮೂಲಕ ಚೀನಾವು ಪ್ರಮುಖ ಹೆದ್ದಾರಿಯ ನಿರ್ಮಾಣವನ್ನು ಪೂರ್ಣಗೊಳಿಸಿದೆ ಇದು ವಿಶ್ವದ ಅತ್ಯಂತ ಆಳವಾದ ಕಣಿವೆ ಆಗಿದ್ದು ಅರುಣಾಚಲ ಪ್ರದೇಶದ ಗಡಿಗೆ ಹತ್ತಿರದಲ್ಲಿದೆ ಎಂದು ಹೇಳಲಾಗಿದೆ.
ಗರಿಷ್ಠ 6,009 ಮೀಟರ್ ಆಳವನ್ನು ಹೊಂದಿರುವ ವಿಶ್ವದ ಆಳವಾದ ಕಣಿವೆ ಎಂದು ಕರೆಯಲ್ಪಡುವ ಯಾರ್ಲುಂಗ್ ಟ್ಸಾಂಗ್ಪೋ ಗ್ರ್ಯಾಂಡ್ ಕಣಿವೆ ಮೂಲಕ 310 ಮಿಲಿಯನ್ ಡಾಲರ್ ವೆಚ್ಚದ ಹೆದ್ದಾರಿಯ ನಿರ್ಮಾಣವು ಕಳೆದ ಶನಿವಾರ ಪೂರ್ಣಗೊಂಡಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.ಪ್ರಬಲ ಬ್ರಹ್ಮಪುತ್ರ ನದಿಯನ್ನು ಟಿಬೆಟ್‌ನಲ್ಲಿ ಯಾರ್ಲುಂಗ್ ಟ್ಸಾಂಗ್ಪೋ ಎಂದು ಕರೆಯಲಾಗುತ್ತದೆ.
ನಿಯಿಂಗ್ಚಿ ಮತ್ತು ಮೆಡೋಗ್ ಕೌಂಟಿಯ ಪ್ಯಾಡ್ ಟೌನ್‌ಶಿಪ್‌ಗೆ ಸಂಪರ್ಕ ಕಲ್ಪಿಸುವ 67.22 ಕಿ.ಮೀ ರಸ್ತೆಯ ಪ್ರಮುಖ ನಿರ್ಮಾಣ ಪೂರ್ಣಗೊಂಡಿದ್ದು, ಎರಡೂ ಸ್ಥಳಗಳ ಪ್ರಯಾಣದ ಸಮಯವನ್ನು ಎಂಟು ಗಂಟೆಗಳಷ್ಟು ಕಡಿತಗೊಳಿಸಲಿದೆ. ಶನಿವಾರ ಬೆಳಿಗ್ಗೆ 2,114 ಮೀಟರ್ ಸುರಂಗವನ್ನು ಅಗೆಯಲಾಗಿದೆ. ಮೆಡುಗ್ ಟಿಬೆಟ್‌ನ ಕೊನೆಯ ಕೌಂಟಿಯಾಗಿದ್ದು, ಇದು ಅರುಣಾಚಲ ಪ್ರದೇಶದ ಗಡಿಗೆ ಹತ್ತಿರದಲ್ಲಿದೆ. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಚೀನಾ ಹೇಳಿಕೊಂಡಿದೆ, ಇದನ್ನು ಭಾರತ ಬಲವಾಗಿ ತಿರಸ್ಕರಿಸಿದೆ. ಭಾರತ-ಚೀನಾ ಗಡಿ ವಿವಾದವು 3,488 ಕಿ.ಮೀ ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಒಳಗೊಂಡಿದೆ.