ತಿರುವನಂತಪುರ: ಸರ್ಕಾರ ನಿಗದಿಪಡಿಸಿದ 500 ರೂ.ಗೆ ಆರ್‍ಟಿಪಿಸಿಆರ್ ಪರೀಕ್ಷೆ ಮಾಡದ ಲ್ಯಾಬ್‍ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ವಿಷಯದಲ್ಲಿ ಯಾವುದೇ ಮುಲಾಜಿಗೂ ಸರ್ಕಾರ ಮುಂದಾಗದು. ಕೆಲವು ಲ್ಯಾಬ್‍ಗಳು ಆರ್‍ಟಿಪಿಸಿಆರ್‍ಗಳ ಬದಲು ಹೆಚ್ಚು ದುಬಾರಿಯ ಟ್ರುನೆಟ್ ಪರೀಕ್ಷೆಗಳಿಗೆ ಮುಂದಾಗುತ್ತಿವೆ ಎಂಬ ವರದಿಗಳಿವೆ. ಪ್ರಸ್ತುತ ಸಂದರ್ಭ ಲಾಭ ಗಳಿಸಲಿರುವ ಅವಕಾಶವಲ್ಲ ಎಂದು ಅವರು ನೆನಪಿನಲ್ಲಿಡಬೇಕು. ಸರ್ಕಾರವು ನಿಗದಿಪಡಿಸಿದ ದರದಲ್ಲಿ ಲ್ಯಾಬ್‍ಗಳು ಪರೀಕ್ಷಿಸಬೇಕು ಮತ್ತು ಯಾವುದೇ ನಕಾರಾತ್ಮಕ ಮನೋಭಾವವನ್ನು ತೆಗೆದುಕೊಳ್ಳಬಾರದು ಎಂದು ಸಿಎಂ ಹೇಳಿದರು.
ಕೋವಿಡ್ ಲಸಿಕೆ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರಸ್ತುತ ಸಾಕಷ್ಟು ಲಭ್ಯವಿಲ್ಲ. ಹೆಚ್ಚಿನ ಲಸಿಕೆಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಶೇಕಡಾ 50 ಹಾಸಿಗೆಗಳನ್ನು ಕಾಯ್ದಿರಿಸಬೇಕು. ಏಕ ಮಾಸ್ಕ್ ಬಳಸಬೇಡಿ. ಡಬಲ್ ಮಾಸ್ಕ್ ಧರಿಸಲು ಕಾಳಜಿ ವಹಿಸಬೇಕು ಎಂದು ಸಿಎಂ ಹೇಳಿದರು.