ನವದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಶುರುವಾದಾಗಿನಿಂದ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ಎದುರಾಗಿದೆ. ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಅತಿ ಹೆಚ್ಚು ಮಂದಿ ತೀವ್ರ ಸೋಂಕಿಗೆ ಒಳಗಾಗಿ ಉಸಿರಾಟ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಎಷ್ಟೋ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ನೋಡಿ ಆಮ್ಲಜನಕ ಪಡೆಯಲು ಹಣಕೊಟ್ಟು ಕಳೆದುಕೊಂಡವರಿದ್ದಾರೆ. ಹೀಗಾಗಿ ದೇಶದ ಪ್ರಮುಖ ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್‌ಗಳು ಯಾವುವು? ಅವುಗಳನ್ನು ಬುಕ್ ಮಾಡುವುದು ಹೇಗೆ, ಬೆಲೆ ಎಷ್ಟು ಇವೆಲ್ಲದರ ಕುರಿತು ಮಾಹಿತಿಯನ್ನು ನಾವು ನೀಡುತ್ತಿದ್ದೇವೆ.
ಕಾನ್ಸನ್‌ಟ್ರೇಟರ್‌ಗಳು ಪರಿಸರದಿಂದ ಗಾಳಿಯನ್ನು ಹೀರಿಕೊಳ್ಳುತ್ತದೆ, ಅನಗತ್ಯ ಅನಿಲಗಳನ್ನು ತೆಗೆದುಹಾಕುತ್ತದೆ, ಆಮ್ಲಜನಕವನ್ನು ಕೇಂದ್ರೀಕರಿಸುತ್ತದೆ ಬಳಿಕ ಪೈಪ್ ಮೂಲಕ ಶುದ್ಧ ಆಮ್ಲಜನಕವನ್ನು ನೀಡುತ್ತದೆ.
ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್‌ಗಳು ವಿವಿಧ ಗಾತ್ರದಲ್ಲಿ ಲಭ್ಯವಿದೆ. ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್‌ಗಳಲ್ಲಿ ಫಿಲಿಪ್ಸ್ ಹಾಗೂ ಮೆಡಿಕಾರ್ಟ್ ಪ್ರಮುಖವಾದದ್ದು, ಚೀನಾ ಮೂಲದ ಕಾನ್ಸನ್‌ಟ್ರೇಟರ್ಸ್‌ಗಳು ಅಗತ್ಯವಿರುವ ಗುಣಮಟ್ಟ ಹಾಗೂ ಕಾರ್ಯಕ್ಷಮತೆ ಒದಗಿಸುತ್ತಿಲ್ಲ.
ಚೀನಾ ಕಾನ್ಸನ್‌ಟ್ರೇಟರ್ಸ್‌ಗಳು 5L ಪ್ರತಿ ನಿಮಿಷಕ್ಕೆ 50,000-55 ಸಾವಿರ ರೂ ಇದೆ, ಫಿಲಿಪ್ಸ್ 65 ಸಾವಿರ ರೂ,ಗೆ ಲಭ್ಯವಿದೆ. ಅದರಲ್ಲಿ ಪೋರ್ಟೆಬಲ್ ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್ ಕೂಡ ಇದೆ.
ಆಮ್ಲಜನಕ ಬೆಂಬಲಿತ ಆಂಬ್ಯುಲೆನ್ಸ್ ಲಭ್ಯವಿಲ್ಲದಿದ್ದಾಗ ರೋಗಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಅಗತ್ಯವಿರುವಾಗ ಇದನ್ನು ಬಳಸಬಹುದು, ಇವುಗಳನ್ನು ಸ್ಮಾರ್ಟ್‌ಫೋನ್‌ನಂತೆ ಚಾರ್ಜ್ ಮಾಡಬಹುದು.
ಪ್ರಮುಖ ಕಾನ್ಸನ್‌ಟ್ರೇಟರ್ಸ್‌ಗಳು:
ಫಿಲಿಪ್ಸ್ ಎವರ್‌ಫ್ಲೋ:
ಏರ್‌ಸೆಪ್ ನ್ಯೂ ಲೈಫ್ ಇಂಟೆನ್ಸಿಟಿ:
ಗಿವಿಎಸ್ 10 ಲೀಟರ್ ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್:
ಡೆವಿಲ್‌ಬಿಸ್ 10ಲೀಟರ್ ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್: