ತಲೆ ನೋವು ಬಂತು ಅಂದ್ರೆ ಸಾಕು ಎಲ್ಲರೂ ಮೊದಲು ಮಾಡುವ ಕೆಲಸ ಅಂದ್ರೆ ವಿಕ್ಸ್ ತೆಗೆದುಕೊಂಡು ಅದನ್ನು ಹೆಣೆಗೆ ಹಚ್ಚುವುದು ಮತ್ತು ಅದರ ವಾಸನೆ ತೆಗೆದುಕೊಂಡರೆ ತಲೆ ನೋವು ಹೋಗುತ್ತದೆ ಎಂದು ಕೊಳ್ಳುತ್ತೇವೆ. ಹಾಗೆಯೇ ಕೆಲವರಂತೂ ವಿಕ್ಸ್ ಗೆ ತುಂಬಾ ಅಡಿಕ್ಟ್ ಆಗಿರುತ್ತಾರೆ. ಅಂದರೆ ರಾತ್ರಿಯ ಸಮಯದಲ್ಲಿ ವಿಕ್ಸ್ ನ ವಾಸನೆಯನ್ನು ತೆಗೆದುಕೊಳ್ಳಲಿಲ್ಲ ಅಂದ್ರೆ ನಿದ್ದೇನೆ ಬರಲ್ಲ ಎನ್ನುತ್ತಾರೆ.
ಹಾಗೆಯೇ ಇನ್ನೂ ಕೆಲವರು ಯಾವಾಗಲೂ ಅವರ ಬಳಿಯಲ್ಲೇ ವಿಕ್ಸ್ ನ ಡಬ್ಬವನ್ನು ಇಟ್ಟುಕೊಂಡಿರುತ್ತಾರೆ. ಸ್ವಲ್ಪ ತಲೆನೋವು ಬಂದ ತಕ್ಷಣ ಅದನ್ನು ಹಚ್ಚಿಕೊಳ್ಳುತ್ತಾರೆ. ಆದರೆ ಈ ವಿಕ್ಸ್ ಕೇವಲ ತಲೆನೋವನ್ನು ಮಾತ್ರ ಗುಣ ಗುಣಪಡಿಸುವುದಿಲ್ಲ. ಈ ವಿಕ್ಸ್ ನಿಂದ ಇನ್ನು ಹಲವಾರು ರೀತಿಯ ಪ್ರಯೋಜನವನ್ನು ನಾವು ಪಡೆಯಬಹುದು. ಸ್ನಾಯುಗಳು, ಬೆನ್ನು ನೋವನ್ನು ಕೂಡ ನಿವಾರಣೆ ಮಾಡುತ್ತದೆ. ವಿಕ್ಸ್ ವೇಪೋರಬ್ ಸ್ನಾಯುಗಳ ಒತ್ತಡವನ್ನು ಕಡಿಮೆ ಮಾಡುತ್ತದೆ.
ಹೊಟ್ಟೆ ಕೊಬ್ಬನ್ನು ತೊಡೆದುಹಾಕಲು ಕೂಡ ವಿಕ್ಸ್ ಸಹಾಯ ಮಾಡುತ್ತದೆ. ಅದಕ್ಕೆ ಏನು ಮಾಡಬೇಕು ಅಂದರೆ ಒಂದು ಚಮಚ ಪುಡಿ ಮಾಡಿದ ಟ್ಯಾಬ್ಲೆಟ್ ಕ್ಯಾಂಪಾರ್ (ಕರ್ಪೂರ), ಒಂದು ಚಮಚ ಮದ್ಯ, ಒಂದು ಚಮಚ ಅಡಿಗೆ ಸೋಡಾ, ಮತ್ತು ವಿಕ್ಸ್ ಅನ್ನು ಮಿಶ್ರಣ ಮಾಡಿಕೊಂಡು ಅದನ್ನು ನಿತ್ಯ ವ್ಯಾಯಾಮ ಮಾಡುವ ಮೊದಲು ಹೊಟ್ಟೆಗೆ ಹಚ್ಚಿಕೊಳ್ಳುವುದರಿಂದ ಕೂಡ ಹೊಟ್ಟೆಯ ಕೊಬ್ಬು ಕರಗುತ್ತದೆ.
ಮುಖದಲ್ಲಿ ಆಗುವ ಮೊಡವೆ, ಗುಳ್ಳೆ, ಅಲರ್ಜಿ, ಇನ್ನಿತರ ಸಮಸ್ಯೆಗೆ ವಿಕ್ಸ್ ಅನ್ನು ತೆಗೆದುಕೊಂಡು ತೆಳುವಾಗಿ ಹಚ್ಚಬೇಕು. ನಂತರ ಅದನ್ನು ಬೆಳಿಗ್ಗೆ ಎದ್ದು ತಣ್ಣೀರಿನಿಂದ ತೊಳೆಯಬೇಕು .ಹೀಗೆ ಮಾಡುವುದರಿಂದ ಮೊಡವೆ, ಅಲರ್ಜಿ, ಗುಳ್ಳೆಗಳು ಬೇಗ ಗುಣ ಆಗುತ್ತದೆ.
ಕಾಲುಗಳಲ್ಲಿ ಬಿರುಕು ಕಾಣಿಸಿಕೊಂಡಾಗ ಆ ಭಾಗಕ್ಕೆ ವಿಕ್ಸ್ ಅನ್ನು ಹಚ್ಚಿ ನಂತರ ಸಾಕ್ಸ್ ಹಾಕಿಕೊಂಡು ಮಲಗಬೇಕು. ನಂತರ ಬೆಳಿಗ್ಗೆ ಎದ್ದು ಸ್ವಲ್ಪ ಬಿಸಿ ಇರುವ ನೀರಿನಿಂದ ತೊಳೆಯಬೇಕು ಹೀಗೆ ಮಾಡುವುದರಿಂದ ಕಾಲಿನ ಬಿರುಕು ಬೇಗ ಹೋಗುತ್ತದೆ.
ವಿಕ್ಸ್ ನ ವಾಸನೆ ತೆಗೆದುಕೊಳ್ಳುವುದರಿಂದ ಮೂಗು ಕಟ್ಟಿಕೊಂಡಿರುವುದು ಹೋಗುತ್ತದೆ ಜೊತೆಗೆ ಕಫ, ಗಂಟಲು ಕಿರಿ ಕಿರಿ, ಗಂಟಲು ನೋವು, ಕೆಮ್ಮು ಎಲ್ಲವೂ ಕೂಡ ಗುಣ ಆಗಲು ಇದು ಸಹಾಯ ಮಾಡುತ್ತದೆ.
ದೇಹದಲ್ಲಿ ನೋವಿರುವ ಭಾಗಕ್ಕೆ ವಿಕ್ಸ್ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡುವುದರಿಂದ ಕೂಡ ನೋವು ಬೇಗ ನಿವಾರಣೆ ಆಗುತ್ತದೆ.
ವಿಕ್ಸ್ ಅನ್ನು ಒಂದು ತೆರೆದ ಬಟ್ಟಲಿನಲ್ಲಿ ಅಂದರೆ ಅದರ ವಾಸನೆ ಮನೆಯಲ್ಲಿ ಹರಡುವಂತೆ ಇಡುವುದರಿಂದ ಮನೆಗೆ ಯಾವುದೇ ರೀತಿಯ ಕೀಟಾಣುಗಳು, ಪ್ರಾಣಿಗಳು ಒಳಗೆ ಬರುವುದಿಲ್ಲ.
ಚರ್ಮದಲ್ಲಿ ತುರಿಕೆಗಳು ಆಗಿದ್ದರೆ ಅಲ್ಲಿಗೆ ವಿಕ್ಸ್ ಅನ್ನು ಹಚ್ಚುವುದರಿಂದ ಬೇಗ ಗುಣ ಆಗುತ್ತದೆ. ಗಾಯಗಳು, ಬೊಬ್ಬೆಗಳು, ಆಗಿದ್ದಾಗ ಆ ಜಾಗಕ್ಕೆ ವಿಕ್ಸ್ ಅನ್ನು ಹಚ್ಚುವುದರಿಂದ ಯಾವುದೇ ರೀತಿಯ ಸೋಂಕು ಆಗದೆ ಗಾಯ, ಬೊಬ್ಬೆ ಮಾಯವಾಗುತ್ತದೆ. ಆದರೆ ವಿಕ್ಸ್ ಹಚ್ಚಿದಾಗ ಉರಿ ಇರುತ್ತದೆ. ವಿಕ್ಸ್ ಕೇವಲ ತಲೆ ನೋವಿಗೆ ಮಾತ್ರ ಅಲ್ಲದೆ ಹಲವಾರು ರೀತಿಯ ಪ್ರಯೋಜನಗಳನ್ನು ನಾವು ಪಡೆಯಬಹುದು.