ತಿರುವನಂತಪುರ: ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ (ಪರಿಯಾರಂ) ಡಯಾಲಿಸಿಸ್ ಯಂತ್ರವನ್ನು ನಿರ್ವಹಿಸಲು ಆರ್‍ಒ ಅಗತ್ಯವಿದೆ. ನೀರಿನ ಸಂಸ್ಕರಣಾ ಘಟಕದ ವೈಫಲ್ಯದಿಂದಾಗಿ ಡಯಾಲಿಸಿಸ್ ಚಿಕಿತ್ಸೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪ್ರತಿಕ್ರಿಯೆ ನೀಡಿದ್ದಾರೆ. ಹಾನಿಗೊಳಗಾದ ಆರ್.ಒ. ನೀರಿನ ಸಂಸ್ಕರಣಾ ಘಟಕದ ಕಾರ್ಯಾಚರಣೆಯನ್ನು ಇಂದು ಪುನಃಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿರುವರು. ಕೊರೋನಾ ರೋಗಿಗಳಿಗೆ ಡಯಾಲಿಸಿಸ್ ಮಾಡುವುದನ್ನು ನಿಲ್ಲಿಸಲಾಗುವುದಿಲ್ಲ ಎಂದು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ. ಡಯಾಲಿಸಿಸ್ ನಿಲ್ಲಿಸಿರುವ ಬಗ್ಗೆ ಮಾಧ್ಯಮಗಳು ವರದಿಮಾಡಿದ್ದವು.
ಮೂರು ವಾರಗಳ ಹಿಂದೆ, ಹಳೆಯ ಘಟಕದ ಮೋಟಾರ್ ನ ಅಸಮರ್ಪಕ ಕಾರ್ಯವಿಧಾನದಿಂದ ಡಯಾಲಿಸಿಸ್‍ಗೆ ಅಡ್ಡಿಯಾಗದಂತೆ ಸರಿಪಡಿಸಲಾಯಿತು. ಪ್ರಸ್ತುತ ಫಿಲ್ಟರ್ ಮೆಂಬರೇನ್ ಹಾನಿಗೊಳಗಾಗಿರುವುದು ಸಮಸ್ಯೆ ಸೃಷ್ಟಿಸಿದೆ. ತಂತ್ರಜ್ಞರು ಎರ್ನಾಕುಳಂನಿಂದ ಆಗಮಿಸಬೇಕಿದೆ. ಇಂದು ಸಂಜೆ ಸಮಸ್ಯೆಯನ್ನು ಬಗೆಹರಿ¸ಲಾಗುವುದೆಂದು ಅಧಿಕೃತರು ತಿಳಿಸಿದ್ದಾರೆ. ತುರ್ತು ಚಿಕಿತ್ಸೆಗಳಿಗೆ ತಳಿಪರಂಬ ಮತ್ತು ಪಯ್ಯನ್ನೂರು ತಾಲ್ಲೂಕು ಆಸ್ಪತ್ರೆಗಳಿಗೆ ರೋಗಿಗಳನ್ನು ಕಳುಹಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪರಿಯಾರಂನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಾಸರಗೋಡು, ಕಣ್ಣೂರು ಜಿಲ್ಲೆಯ ಪ್ರಮುಖ ಅತಿದೊಡ್ಡ ಆಸ್ಪತ್ರೆಯಾಗಿದ್ದು, ಡಯಾಲಿಸಿಸ್‍ಗಾಗಿ ಪ್ರತಿದಿನ ಸುಮಾರು 100 ರೋಗಿಗಳು ಅವಲಂಬಿತರಾಗಿದ್ದಾರೆ. ಗುರುವಾರ ಬೆಳಿಗ್ಗೆಯಿಂದ ಡಯಾಲಿಸಿಸ್ ಘಟಕವನ್ನು ಮುಚ್ಚಲಾಗಿದೆ. ಆರ್.ಒ. ಡಯಾಲಿಸಿಸ್ ನಿಲ್ಲಿಸಲು ನೀರು ಸಂಸ್ಕರಣಾ ಘಟಕದಲ್ಲಿ ಸೋರಿಕೆಯಾಗಿರುವುದು ಕಾರಣ ಎಂದು ಅಧಿಕಾರಿಗಳು ವಿವರಿಸಿದರು. ಘಟಕದಲ್ಲಿನ ಸೋರಿಕೆ ಸಮಸ್ಯೆಗೆ ಕಾರಣವಾಗಿತ್ತು. ಅನೇಕ ರೋಗಿಗಳು ಡಯಾಲಿಸಿಸ್‍ಗೆ ಒಳಗಾಗದೆ ಮರಳಿರುವರು.
ಕೊರೊನಾ ಸನ್ನಿವೇಶವಾದದ್ದರಿಂದ ಡಯಾಲಿಸಿಸ್ ನ್ನು ಈಗ ಎಲ್ಲಾ ಆಸ್ಪತ್ರೆಗಳಲ್ಲೂ ನಡೆಸಲಾಗುತ್ತಿಲ್ಲ. ಆದ್ದರಿಂದ, ಪರಿಯಾರಂ ಆಸ್ಪತ್ರೆ ಡಯಾಲಿಸಿಸ್ ನ್ನು ನಿಲ್ಲಿಸಿದರೆ, ರೋಗಿಗಳಿಗೆ ಬೇರೆ ಯಾವುದೇ ಮಾರ್ಗೋಪಾಯಗಳಿರುವುದಿಲ್ಲ. ಈ ಹಿಂದೆ ಆಸ್ಪತ್ರೆಯಲ್ಲಿ 5 ಲಕ್ಷ ರೂ.ಗಳ ವೆಚ್ಚದಲ್ಲಿ ಹೊಸ ಯಂತ್ರಗಳನ್ನು ಅಳವಡಿಸಲಾಗಿತ್ತು. ಆದರೆ ನೀರಿನ ಸಂಸ್ಕರಣಾ ಘಟಕ ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ. ಇದು ಬಿಕ್ಕಟ್ಟನ್ನು ಸೃಷ್ಟಿಸುತ್ತದೆ.