ಕೊಚ್ಚಿ: ಏರ್ ಇಂಡಿಯಾ ಸಾಟ್ಸೆ ಪ್ರಕರಣದಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಳನ್ನು ಬಂಧಿಸಲಾಗಿದೆ. ಅಪರಾಧ ವಿಭಾಗ ಸ್ವಪ್ನಾಳನ್ನು ಬಂಧಿಸಿದೆ. ಸಪ್ನಾಳನ್ನು ವಶಕ್ಕೆ ಪಡೆಯಬೇಕೆಂದು ಕೋರಿ ತನಿಖಾ ತಂಡ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.
ಕೊಫೆಪೋಸಾ ಆರೋಪದ ಹಿನ್ನೆಲೆಯಲ್ಲಿ ಆಕೆಯನ್ನು ಇನ್ನೂ ಬಿಡುಗಡೆ ಮಾಡಲಾಗದ ಕಾರಣ ಅಪರಾಧ ವಿಭಾಗವು ತಿರುವನಂತಪುರ ಜೈಲಿನಲ್ಲಿ ಸ್ವಪ್ನಾಳನ್ನು ಬಂಧಿಸಿದೆ. ಅಪರಾಧ ವಿಭಾಗವು ಸ್ವಪ್ನಳನ್ನು ವಶಕ್ಕೆ ಕೋರಿ ತಿರುವನಂತಪುರ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಆಕೆಯನ್ನು 10 ದಿನಗಳ ಕಾಲ ಬಂಧನದಲ್ಲಿರಲು ತನಿಖಾ ದಳ ಆಗ್ರಹಿಸಿದೆ. ಏರ್ ಇಂಡಿಯಾ ಅಧಿಕಾರಿ ಎಲ್.ಎಸ್. ಸಿಬು ವಿರುದ್ಧ ಸುಳ್ಳು ಕಿರುಕುಳ ದೂರು ನೀಡಿದ್ದಾಗಿ ಸ್ವಪ್ನಾ ವಿರುದ್ಧದ ಪ್ರಕರಣ ದಾಖಲಿಸಲಾಗಿತ್ತು. ಏರ್ ಇಂಡಿಯಾ ಸಾಟ್ಸೆ ಮಾಜಿ ಉಪಾಧ್ಯಕ್ಷ ಬಿನೊಯ್ ಜಾಕೋಬ್ ಕೂಡ ಈ ಪ್ರಕರಣದ ಆರೋಪಿಯಾಗಿರುವನು.
ಈ ಹಿಂದೆ ಅಪರಾಧ ವಿಭಾಗವು ಎಲ್.ಎಸ್. ಸಿಬು ಮತ್ತು ಇತರ ಏರ್ ಇಂಡಿಯಾ ಅಧಿಕಾರಿಗಳನ್ನು ಪ್ರಶ್ನಿಸಿತ್ತು. ಆ ಬಳಿಕ ಸ್ವಪ್ನಾ ಳನ್ನು ಇದೀಗ ಬಂಧಿಸಲಾಗಿದೆ. ಸ್ವಪ್ನಾ ಏರ್ ಇಂಡಿಯಾ ಉದ್ಯೋಗಿಯಾಗಿದ್ದಾಗ,ಸಂಚು ರೂಪಿಸಿ ಸುಳ್ಳು ದೂರು ನೀಡಿದ್ದಳು.