ಕಾಸರಗೋಡು: ಕೋವಿಡ್ ಸೋಂಕು ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ರೋಗ ಲಕ್ಷಣಗಳು ತಲೆದೋರಿದ ಮಂದಿ ಕಡ್ಡಾಯವಾಗಿ ರೂ< ಕ್ವಾರೆಂಟೈನ್ ಪಾಲಿಸಬೇಕು ಎಂದು ರಾಜ್ಯ ಆರೋಗ್ಯ ವಿಭಾಗ ತಿಳಿಸಿದೆ.
ಇವರು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಗೆ ಒಳಗಾಗಬೇಕು. ಫಲಿತಾಂಶ ಬರುವ ವರೆಗೆ ರೂಂ ಕ್ವಾರೆಂಟೈನ್ ಪಾಲಿಸಬೇಕು ಎಂದು ವೈದ್ಯಾಧಿಕಾರಿ ಡಾ.ಕೆ.ಎಸ್.ಷಿನು ತಿಳಿಸಿದರು.
ಕೋವಿಡ್ ಪಾಸಿಟಿವ್ ಆದಲ್ಲಿ ಸಮೀಪದ ಆರೋಗ್ಯ ಸಂಸ್ಥೇಗೆ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ನೀಡಬೇಕು. ಆರೋಗ್ಯ ಸಂಸ್ಥೆಯ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರ ದೂರವಾಣಿ ಸಂಖ್ಯೆ ತಿಳಿಯದೇ ಇರುವವರು ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅದೂ ಸಾಧ್ಯವಾಗದೇ ಇದ್ದಲ್ಲಿ ದಿಶಾ ಸಂಸ್ಥೆಗೆ 1057/0471, 2552056, 1077, 9188610100, 0471 2779000 ಗೆ ಕರೆ ಮಾಡಿ ಕಡ್ಡಾಯವಾಗಿ ಅವರು ನೀಡುವ ಸಲಹೆಗಳನ್ನು ಪಾಲಿಸಬೇಕು.
ರೋಗಿಗಳು ಮತ್ತು ಕಿರು ರೋಗ ಲಕ್ಷಣ ಹೊಂದಿರುವವರು ಸಮೀಪದ ಆರೋಗ್ಯ ಸಂಸ್ಥೆಯ ವೈದ್ಯಾಧಿಕಾರಿ ಅವರ ಆದೇಶ ಪ್ರಕಾರ ಮನೆಯಲ್ಲೇ ರೂಂ ಕ್ವಾರೆಂಟೈನ್ ಪಾಲಿಸಬಹುದಾಗಿದೆ. ಅಟಾಚ್ಡ್ ಬಾತ್ ರೂಂ ಸೌಲಭ್ಯ ವಿರುವ ಕೊಠಡಿಗಳಲ್ಲಿ ಅವರು ಕ್ವಾರೆಂಟೈನ್ ಪಾಲಿಸಬೇಕು. ಇಂಥಾ ಸೌಲಭ್ಯ ಇಲ್ಲದೇ ಇರುವವರು ಪಂಚಾಯತ್ ಗಳು ಸಿದ್ಧಪಡಿಸಿರುವ ಡೊಮಿಸಿಲರಿ ಕೇರ್ ಸೆಂಟರ್ ಗಳನ್ನು ಬಳಸಬಹುದು.
ರೋಗ ಗಂಭೀರ ಸ್ಥಿತಿಯಲ್ಲಿರುವವರು ವೈದ್ಯಾಧಿಕಾರಿ ಅವರ ಆದೇಶ ಪ್ರಕಾರ ಸಿ.ಎಫ್.ಎಲ್.ಟಿ.ಸಿ. ಗೆ ಯಾ ಇನ್ನಿತರೆಡೆಗೆ ದಾಖಲಾಗಬೇಕು. ಇತರ ಸೌಖ್ಯಗಳಿಂದ ಬಳಲುತ್ತಿರುವವರಿಗೆ ಕೋವಿಡ್ ಬಾಧಿಸಿದರೆ ಅಸೌಖ್ಯದ ಪ್ರಮಾಣ ನೋಡಿಕೊಂಡು ವೈದ್ಯಾಧಿಕಾರಿಯ ಆದೇಶ ಪ್ರಕಾರ ಸಿ.ಎಫ್.ಎಲ್.ಟಿ.ಸಿ.ಗೆ ಯಾ ಸಿ.ಎಸ್.ಎಲ್.ಟಿ.ಸಿ.ಗೆ ಕಳುಹಿಸಿ ಚಿಕಿತ್ಸೆ ನೀಡಬಹುದಾಗಿದೆ. ಉಲ್ಭಣಾವಸ್ಥೆಯಲ್ಲಿರುವ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕು. ಕೋವಿಡ್ ರೋಗ ನಿಯಂತ್ರಣ ನಿಟ್ಟಿನಲ್ಲಿ ಆರೋಗ್ಯ ಕಾರ್ಯಕರ್ತರು ತಿಳಿಸುವ ಕಟ್ಟುನಿಟ್ಟುಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸುವಂತೆ ರಾಜ್ಯ ಆರೋಗ್ಯ ವಿಭಾಗ ವಿನಂತಿಸಿದೆ.