ತಿರುವನಂತಪುರ:ಗುರುವಾರ ಅಧಿಕಾರಕ್ಕೆ ಬರಲಿರುವ ಎಲ್.ಡಿ.ಎಫ್ ಸಂಪುಟದಲ್ಲಿ ವಿವಿಧ ಇಲಾಖೆಗಳ ಜವಾಬ್ದಾರಿಗಳನ್ನು ಸಚಿವರಿಗೆ ಹಂಚಿಕೆ ಮಾಡಲಾಗಿದೆ. ಬುಧವಾರ ಬೆಳಿಗ್ಗೆ ಸಿಪಿಎಂ ಸಚಿವಾಲಯದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಿಪಿಎಂನ ವೀಣಾ ಜಾರ್ಜ್ ಆರೋಗ್ಯ ಸಚಿವೆಯಾಗಲಿದ್ದಾರೆ.
ಕೆ.ಎನ್.ಬಾಲಗೋಪಾಲ್ ಅವರು ಹಣಕಾಸು ಸಚಿವರಾಗಲಿದ್ದು, ಕೈಗಾರಿಕಾ ಇಲಾಖೆಯನ್ನು ಪಿ.ರಾಜೀವ್ ಅವರಿಗೆ ನೀಡಲಾಗಿದೆ. ವಿ.ಎನ್.ವಾಸವನ್ ಅಬಕಾರಿ ಸಚಿವರಾಗಿ ಮತ್ತು ಸಾಜಿ ಚೆರಿಯನ್ ಮೀನುಗಾರಿಕಾ ಸಚಿವರಾಗಿರುತ್ತಾರೆ. ವಿ. ಶಿವನಕುಟ್ಟಿಗೆ ಶಿಕ್ಷಣ ಇಲಾಖೆ ನೀಡಲಾಗಿದೆ. ಮೊಹಮ್ಮದ್ ರಿಯಾಜ್ ಅವರಿಗೆ ಪ್ರವಾಸೋದ್ಯಮ ಇಲಾಖೆ ಮತ್ತು ಯುವ ಕಲ್ಯಾಣ ಇಲಾಖೆಯನ್ನು ನೀಡಲಾಗಿದೆ. ಕೆ. ರಾಧಾಕೃಷ್ಣನ್ ಅವರಿಗೆ ದೇವಸ್ವಂ ವಿಭಾಗವನ್ನೂ ನೀಡಲಾಗಿದೆ.
ವಿ. ಅಬ್ದುರಹಿಮಾನ್ ಅವರಿಗೆ ಅಲ್ಪಸಂಖ್ಯಾತ ಕಲ್ಯಾಣ, ಆರ್.ಬಿಂದು ಅವರಿಗೆ ಉನ್ನತ ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆಯನ್ನು ಕೆ ರಾಜನ್ ಗೆ ನೀಡಲು ನಿರ್ಧರಿಸಲಾಗಿದೆ. ವಿ.ಪ್ರಸಾದನ್ ಅವರಿಗೆ ಕೃಷಿ ಇಲಾಖೆ, ಜಿ.ಆರ್ ಅನಿಲ್ ಅವರಿಗೆ ಆಹಾರ, ಚಿಂಚು ರಾಣಿ ಅವರಿಗೆ ಅರಣ್ಯ ಇಲಾಖೆ ನೀಡಲಾಗಿದೆ. ಎಂ.ವಿ.ಗೋವಿಂದನ್ ಅವರು ಸ್ಥಳೀಯಾಡಳಿತ ಸಚಿವರಾಗಲಿದ್ದಾರೆ.