ಕಾಸರಗೋಡು: ಕಾಸರಗೋಡಿಗೆ ಇನ್ನು ಮುಂದೆ ಆಮ್ಲಜನಕವನ್ನು ಪೂರೈಸಲು ಸಾಧ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಹೇಳಿದೆ. ಮಂಗಳೂರಿನಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕಾಸರಗೋಡು ಜಿಲ್ಲಾಧಿಕಾರಿಗಳಿಗೆ ದ.ಕ.ಜಿಲ್ಲಾಡಳಿತ ಬರೆದ ಪತ್ರದಲ್ಲಿ ಮಂಗಳೂರಿನಿಂದ ಆಮ್ಲಜನಕವನ್ನು ಖರೀದಿಸುವ ಕಾಸರಗೋಡಿನ ಆಸ್ಪತ್ರೆಗಳು ಇತರ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಸೂಚಿಸಿದೆ. ಕಳೆದ ಮೂರು ದಿನಗಳಿಂದ ಕಾಸರಗೋಡಿನ ಖಾಸಗೀ ಆಸ್ಪತ್ರೆಗಳಲ್ಲಿ ತೀವ್ರ ಸ್ವರೂಪದ ಆಮ್ಲಜನಕದ ಕೊರತೆ ತಲೆದೋರಿದ್ದು, ಪರ್ಯಾಯ ವ್ಯವಸ್ಥೆಗಳಿಗೆ ಆಸ್ಪತ್ರೆಗಳು ತಿಣುಕಾಡುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.