ದೆಹಲಿ: ಕೋವಿಡ್-19 ಜಾಗೃತಿ ಅಭಿಯಾನದ ಭಾಗವಾಗಿ ನಾಗರಿಕರ ಅನುಕೂಲಕ್ಕಾಗಿ ತಾನು ಆರಂಭಿಸಿರುವ ನಾಲ್ಕು ಹೊಸ ರಾಷ್ಟ್ರೀಯ ಸಹಾಯವಾಣಿಗಳ ಸಂಖ್ಯೆಗಳನ್ನು ಬಿತ್ತರಿಸುವಂತೆ ಕೇಂದ್ರ ಸರ್ಕಾರವು ಖಾಸಗಿ ಸುದ್ದಿ ವಾಹಿನಿಗಳಿಗೆ ಭಾನುವಾರ ಮನವಿ ಮಾಡಿದೆ.
ಇದನ್ನೂ ನೋಡಿ: ಕೋವಿಡ್-19: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಲಭ್ಯ ಸಹಾಯವಾಣಿ ಸಂಖ್ಯೆ ತಿಳಿಯಲು ಕ್ಲಿಕ್ ಮಾಡಿ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಸರ್ಕಾರ ಸೂಚಿಸಿರುವ ಚಿಕಿತ್ಸಾ ಮಾರ್ಗಸೂಚಿ, ನಡವಳಿಕೆ, ಲಸಿಕೆ ಅಭಿಯಾನದ ಕುರಿತು ಪ್ರಚಾರ ಮಾಡುವಲ್ಲಿ ಮತ್ತು ಕೋವಿಡ್ ವಿರುದ್ಧ ಅರಿವು ಮೂಡಿಸಲು ನೆರವಾಗಿದ್ದಕ್ಕಾಗಿ ಕೇಂದ್ರ ಸರ್ಕಾರವು ಸುದ್ದಿ ವಾಹಿನಿಗಳನ್ನು ಪ್ರಶಂಸಿಸಿದೆ.
'ಕೋವಿಡ್ ನಿಯಂತ್ರಿಸುವ ಉದ್ದೇಶವನ್ನು ಸಾಕಾರಗೊಳಿಸುವ ಉದ್ದೇಶದಿಂದ, ನಾಲ್ಕು ರಾಷ್ಟ್ರೀಯ ಮಟ್ಟದ ಸಹಾಯವಾಣಿ ಸಂಖ್ಯೆಯನ್ನು ಪ್ರೈಮ್ ಟೈಂನಲ್ಲಿ, ಜಾಹೀರಾತು ಸಂದರ್ಭಗಳಲ್ಲಿ ಪ್ರಸಾರ ಮಾಡುವಂತೆ ಸೂಚಿಸಲಾಗಿದೆ,' ಎಂದು ಕೇಂದ್ರ ತಿಳಿಸಿದೆ.