ಬೆಂಗಳೂರು: ಸಿಪಿಎಂ ಮುಖಂಡ ಕೊಡಿಯೇರಿ ಬಾಲಕೃಷ್ಣನ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ನ್ಯಾಯಾಲಯಕ್ಕೆ ಬಿನೀಶ್ ಕೊಡಿಯೇರಿ ಅವರ ವಕೀಲರು ಮನವರಿಕೆ ಮಾಡಲೆತ್ನಿಸಿದ ಘಟನೆ ನಿನ್ನೆ ಬೆಂಗಳೂರಲ್ಲಿ ನಡೆದಿದೆ. ಬೆಂಗಳೂರು ಹಣ ವರ್ಗಾವಣೆ ಪ್ರಕರಣದಲ್ಲಿ ಬಿನೀಶ್ ಕೊಡಿಯೇರಿಯ ಜಾಮೀನು ಅರ್ಜಿಯನ್ನು ಪರಿಗಣಿಸುವಾಗ, ವಕೀಲರು ಬಿನೀಶ್ ನ ತಂದೆ ಕೊಡಿಯೇರಿ ಬಾಲಕೃಷ್ಣನ್ ಅವರ ಆರೋಗ್ಯ ಸ್ಥತಿ ಗಂಭೀರವಾಗಿರುವುದರಿಂದ ಬಿನೀಶ್ ಗೆ ತಕ್ಷಣ ಮನೆಗೆ ಹೋಗಲು ಕನಿಷ್ಠ ಕೆಲವು ದಿನಗಳವರೆಗೆ ಜಾಮೀನು ನೀಡಬೇಕು ಎಂದು ಹೇಳಿದರು.
ಆದರೆ ಜಾರಿ ನಿರ್ದೇಶನಾಲಯದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು ಬಿನೀಶ್ ಗೆ ಜಾಮೀನು ನೀಡುವುದನ್ನು ತೀವ್ರವಾಗಿ ವಿರೋಧಿಸಿದರು. ಈ ಪ್ರಕರಣವು ಮಾದಕವಸ್ತು ವ್ಯವಹಾರಕ್ಕೆ ಸಂಬಂಧಿಸಿರುವುದರಿಂದ ಮಧ್ಯಂತರ ಜಾಮೀನು ನೀಡಲು ಯಾವುದೇ ಕಾನೂನು ಇಲ್ಲ ಎಂದು ವಾದಿಸಲಾಯಿತು.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಅನೇಕರು, ಬಿನೀಶ್ ಅವರ ಚಾಲಕ ಸೇರಿದಂತೆ ಇನ್ನೂ ದೊಡ್ಡ ಕುಳಗಳಿವೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಪ್ರಕರಣವನ್ನು ಮೇ 12 ರವರೆಗೆ ಮುಂದೂಡಲಾಗಿದೆ.
ಏತನ್ಮಧ್ಯೆ, ಕೊಡಿಯೇರಿ ಬಾಲಕೃಷ್ಣನ್ ಅವರನ್ನು ಪಕ್ಷಕ್ಕೆ ಕರೆತರಲು ಮಾತುಕತೆ ನಡೆಸುತ್ತಿದ್ದಾರೆ ಎಂಬ ವರದಿಗಳ ನಡುವೆ ಬಿನೀಶ್ ಕೊಡಿಯೇರಿ ತಂದೆಗೆ ಅನಾರೋಗ್ಯ ತೀವ್ರವೆಂದು ಜಾಮೀನು ಕೋರಿರುವುದು ಹಲವು ಸಂಶಯಗಳಿಗೂ ಕಾರಣವಾಗಿದೆ. ರಾಜ್ಯದ ನೂತನ ಸಚಿವರುಗಳ ಆಯ್ಕೆ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಪಕ್ಷದ ಸಮಾವೇಶಗಳನ್ನು ನಿಗದಿಪಡಿಸಿದ ಬಳಿಕ ಕೊಡಿಯೇರಿ ಕಾರ್ಯದರ್ಶಿಯಾಗಿ ಮರಳಬಹುದು ಎಂಬ ಸೂಚನೆಗಳಿವೆ