ಕಾಸರಗೋಡು: ಕೋವಿಡ್ ಪ್ರತಿರೋಧ ಚಟುವಟಿಕೆಗಳಲ್ಲಿ ಮಾದರಿಯಾಗಿ ಕೇರಳ ಕೇಂದ್ರ ವಿವಿ ಸೇವೆಸಲ್ಲಿಸುತ್ತಿದೆ. ವಿವಿಯಲ್ಲಿ ನಡೆಸಲಾಗುವ ಕೋವಿಡ್ ತಪಾಸಣೆಯ ಸಂಖ್ಯೆ ಈಗ ಒಂದು ಸಾವಿರ ಮೀರುತ್ತಿದೆ.
ಕೋವಿಡ್ ಮೊದಲ ಅಲೆಯ ಅವಧಿಯಲ್ಲಿ ಪ್ರತಿದಿನ ಸರಾಸರಿ 500 ರಿಂದ 600 ಸ್ಯಾಂಪಲ್ ಗಳನ್ನು ತಪಾಸಣೆಗೆ ಕಳುಹಿಸಲಾಗಿದೆ. ಈಗ ಅದು 1200 ಆಗಿ ಹೆಚ್ಚಳಗೊಂಡಿದೆ. ಮಂಗಳವಾರ(ಮೇ 11) ವರೆಗೆ ಒಟ್ಟು 1,07,376 ಮಂದಿಯ ಸ್ಯಾಂಪಲ್ ತಪಾಸಣೆ ನಡೆಸಲಾಗಿದೆ.
ರಾಜ್ಯ ಆರೋಗ್ಯ ಇಲಾಖೆಯ ಆಗ್ರಹ ಪ್ರಕಾರ ಕಳೆದ ವರ್ಷ ಮಾ.30ರಂದು ಕೋವಿಡ್ ತಪಾಸಣೆಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್(ಐ.ಸಿ.ಎಂ.ಆರ್.)ನ ಅಂಗೀಕಾರ ಲಭಿಸಿತ್ತು. ಕಾಸರಗೊಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಬಾಧಿತರ ಸಂಖ್ಯೆ ನಿಯಂತ್ರಣಾತೀತವಾಗಿ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತೆಯ ಆದೇಶ ಪ್ರಕಾರ ಕೇಂದ್ರ ವಿವಿಯ ವೈರಾಲಜಿ ಲಾಬ್ ನಲ್ಲಿ ಕೋವಿಡ್ ತಪಾಸಣೆ ಆರಂಭಿಸಲಾಗಿತ್ತು.
ಜಿಲ್ಲೆಯ ವಿವಿಧ ಪ್ರಾಥಮಿಕ, ಸಮಾಜ, ಕುಟುಂಬ ಆರೋಗ್ಯ ಕೇಂದ್ರಗಳು, ಜಿಲ್ಲಾ ಅಸ್ಪತ್ರೆ, ಪ್ರತ್ಯೇಕ ಕ್ಯಾಂಪ್ ಗಳು ಇತ್ಯಾದಿಗಳಲ್ಲಿ ಸಂಗ್ರಹಿಸಲಾಗುವ ಸ್ಯಾಂಪಲ್ ಗಳನ್ನು ಇಲ್ಲಿ ತಪಾಸಣೆ ನಡೆಸಲಾಗುತ್ತದೆ. ಬಯೋ ಕೆಮೆಸ್ಟ್ರಿ ಆಂಡ್ ಮಾಲಿಕ್ಯೂಲರ್ ಬಯಾಲಜಿ ವಿಭಾಗ ವ್ಯಾಪ್ತಿಯ ವೈರಾಲಜಿ ಲಾಬ್ ನಲ್ಲಿ ಈ ತಪಾಸನೆ ಜರುಗುತ್ತದೆ. ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಈಗ ಪ್ರತಿದಿನ ಸರಾಸರಿ 1200 ತಪಾಸಣೆ ನಡೆಯುತ್ತಿದೆ ಎಂದು ಈ ಚಟುವಟಿಕೆಗಳಿಗೆ ನೇತೃತ್ವ ವಹಿಸುತ್ತಿರುವ ಇಲಾಖೆ ಮುಖ್ಯಸ್ಥ ಡಾ.ರಾಜೇಂದ್ರ ಪಿಲಾಂಗಟ್ಟೆ ತಿಳಿಸಿದರು. 1700 ತಪಾಸನೆಗಳೂ ನಡೆದ ದಿನಗಳಿವೆ . ಮೂರು ಪಾಳಿಗಳಂತೆ 24 ತಾಸುಗಲೂ ಚಟುವಟಿಕೆ ನಡೆಸುತ್ತಿರುವ ವೈರಾಲಜಿ ಲಾಬ್ ವಿವಿಯಲ್ಲಿದೆ. ತಪಾಸನೆಯ ಫಲಿತಾಂಶ ರಾಜ್ಯ ಸರಕಾರದ ಪೆÇೀರ್ಟಲ್ ನಲ್ಲಿ ಅಪ್ ಲೋಡ್ ಮಾಡಲಾಗುತ್ತದೆ.
ಡಾ.ರಾಜೇಂದ್ರ ಪಿಲಾಂಗಟ್ಟೆ ಅವರಲ್ಲದೆ ಶಿಕ್ಷಕರಾದ ಡಾ.ಸಮೀರ್ ಕುಮಾರ್, ಲಾಬ್ ಟೆಕ್ನೀಶಿಯನ್ ಗಳಾದ ಆರತಿ ಎಂ., ಕ್ರಿಜಿತ್ ಎಂ.ವಿ., ಸುನೀಶ್ ಕುಮಾರ್, ರೂಪೇಶ್ ಕೆ., ರೋಶ್ನಾ ರಮೇಶನ್, ವೀಣಾ, ಲಾಬ್ ಸಹಾಯಕರಾದ ಜಿತಿನ್ ರಾಜ್ ವಿ., ಷಾಹುಲ್ ಹಮೀದ್ ಸಿಂಸಾರ್, ಡಾಟಾ ಎಂಟ್ರಿ ಆಪರೇಟರ್ ಗಳಾದ ಮುಹಮ್ಮದ್ ರಿಸ್ವಾನ್, ನಿಖಿಲ್ ರಾಜ್, ಸಚಿನ್ ಎಂ.ಪಿ., ಸಂಶೊಧನೆ ವಿದ್ಯಾರ್ಥಿಗಳಾದ ಪ್ರಜಿತ್, ರಂಜಿತ್ ಅಶುತೋಷ್, ಅಂಜಲಿ ಮೊದಲಾದವರು ತಂಡದಲ್ಲಿದ್ದಾರೆ.
ದೆಶದಲ್ಲೇ ಪ್ರಥಮ ಬಾರಿಗೆ ಈ ಮೂಲಕ ಕೇಂದ್ರ ವಿವಿಯೊಂದು ಕೋವಿಡ್ ತಪಾಸಣೆಗೆ ನೇತೃತ್ವ ವಹಿಸುತ್ತಿದೆ. ಉಪಕುಲಪತಿ ಪೆÇ್ರ.ಎಚ್.ವೆಂಕಟೇಶ್ವರುಲು ಅವರ ಸಕ್ರಿಯ ಸಹಭಾಗಿತ್ವ ಮತ್ತು ಬೆಂಬಲ ಇದರ ಹಿಂದಿದೆ. ಈ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕೇಂದ್ರ ವಿವಿಯನ್ನು ರಾಜ್ಯ ಸರಕಾರ ಗೌರವಿಸಿತ್ತು.
ಕೋವಿಡ್ ತಪಾಸನೆ ಮುಂದುವರಿಯಲಿದೆ: ಉಪಕುಲಪತಿ
ಸಾಮಾಜಿಕ ಹೊಣೆ ಮತ್ತು ಕರ್ತವ್ಯವನ್ನು ಈ ಮೂಲಕ ವಿವಿಯ ನಡೆಸುತ್ತಿದೆ ಎಂದು ವಿವಿಯ ಉಪಕುಲಪತಿ ಪೆÇ್ರ. ಎಚ್.ವೆಂಕಟೇಶ್ವರುಲು ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ ಪ್ರತಿರೋಧ ಚಟುವಟಿಕೆಗಳು ಇನ್ನೂ ಮ,ಉಮದುವರಿಯಲಿವೆ. ಇದಕ್ಕಾಗಿ ಶಾಶ್ವತ ಸೌಲಭ್ಯವೂ ಇಲ್ಲಿ ಸಿದ್ಧವಾಗುತ್ತಿದೆ. ರಾಜ್ಯ ಆರೋಗ್ಯ ಇಲಾಖೆ, ಜಿಲ್ಲಾಡಳಿತೆಯ ಸಹಕಾರದೊಂದಿಗೆ ವಿವಿಯಲ್ಲಿ ವಾಕ್ಸಿನೆಷನ್ ಕ್ಯಾಂಪೇನ್ ನಡೆಸಿದ್ದು, ಶಿಕ್ಷಕರು ಮತ್ತು ಸಿಬ್ಬಂದಿ ವಾಕ್ಸಿನ್ ಸ್ವೀಕಾರ ಮಾಡಿದ್ದಾರೆ. ಇದಕ್ಕಾಗಿ ರಾಜ್ಯ ಆರೋಗ್ಯ ಸಚಿವೆ, ಜಿಲ್ಲಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿ ಮೊದಲಾದವರಿಗೆ ಕೃತಜ್ಞರಾಗಿರುವುದಾಗಿ ಅವರು ತಿಳಿಸಿದರು.
ಕೋವಿಡ್ ಪ್ರತಿರೋಧ ಚಟುವಟಿಕೆಗಳ ಬಗ್ಗೆ ವಾರಕ್ಕೊಮ್ಮೆ ಅವಲೋಕನ ನಡೆಸಿ, ಚಟುವಟಿಕೆಗಳನ್ನು ಚುರುಕುಗೊಳಿಸಲಾಗುತ್ತಿದೆ. ರಾಜ್ಯ ಸರಕಾರಗಳ ಆದೇಶ ಪ್ರಕಾರ ಸಮಿತಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದವರು ನುಡಿದರು.
ವೈರಸ್ ಬಗ್ಗೆ ಸಮಗ್ರ ಅಧ್ಯಯನಕ್ಕೆ ಸೌಲಭ್ಯ
ಕೊರೋನಾ ವೈರಸ್ ಬಗ್ಗೆ ಸಮಗ್ರ ಅಧ್ಯಯನ ಸಂಬಮದ ಪ್ರತಿತಿಂಗಳು ಸುಮಾರು 300 ಸ್ಯಾಂಪಲ್ಗಳನ್ನು ಹಸ್ತಾಂತರಿಸಲಾಗುತ್ತದೆ. ಈ ವರೆಗೆ ಲಭಿಸಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಯು.ಕೆ. ತಳಿ, ಭಾರತೀಯ ತಳಿ, ದಕ್ಷಿಣ ಆಫ್ರಿಕಾ ತಳಿಗಳನ್ನು ಖಚಿತಪಡಿಸಲಾಗಿದೆ. ಕೇಂದ್ರ ವಿವಿಯಲ್ಲಿರುವ ಸೌಲಭ್ಯ ಬಳಸಿ ವೈರಸ್ ಜಾನಾಂಗಿಕ ಅಧ್ಯಯನ ಸಂಬಂಧ ತಪಾಸಣೆ ಆರಂಭಿಸುವ ಯೋಜನೆಯ ಶಿಫಾರಸು ಸಲ್ಲಿಸಲಾಗಿದೆ. ಜಿಲ್ಲೆಯ್ಲಲೇ ಈ ಸೌಲಭ್ಯ ಆರಂಭಿಸಿದರೆ ಪರಿಣಾಮಕಾರಿಯಾಗಿ ಅತ್ಯುತ್ತಮ ಪ್ರತಿರೋಧ ಚಟುವಟಿಕೆಗಳನ್ನು ನಡೆಸುವ ನಿರೀಕ್ಷೆಗಳಿವೆ.