ಕಾಸರಗೋಡು: ತೌಕ್ತೆ ಚಂಡಮಾರುತದ ಪರಿಣಾಮ ತಲೆದೋರಿದ ಬಿರುಸಿನ ಗಾಳಿಮಳೆಯ ಕಾರಣ ಕಾಸರಗೋಡು ಜಿಲ್ಲೆಯ ವಿದ್ಯುತ್ ವಲಯದಲ್ಲಿ ವ್ಯಾಪಕ ನಾಶ-ನಷ್ಟ ಸಂಭವಿಸಿದೆ.
5 ಟ್ರಾನ್ಸ್ ಫಾರ್ಮರ್ ಗಳು ಸುಟ್ಟುಹೋಗಿವೆ. 3215 ಟ್ರಾನ್ಸ್ ಫಾರ್ಮರ್ ಗಳ ವಿದ್ಯುತ್ ಸಂಪರ್ಕ ಕಡಿಯಬೇಕಾಗಿ ಬಂದಿದೆ. 270 ವಿದ್ಯುತ್ ಕಂಭಗಳು ಮುರಿದುಬಿದ್ದಿವೆ. 532576 ಸರ್ವೀಸ್ ಕನೆಕ್ಷನ್ ಗಳು ಕೆಟ್ಟುಹೋಗಿವೆ. 686 ಪ್ರದೇಶಗಳಲಿ ವಿದ್ಯುತ್ ತಂತಿ ಕಡಿದುಹೋಗಿದೆ.
ಕಳೆದ 4 ದಿನಗಳಿಂದ ಕೆ.ಎಸ್.ಇ.ಬಿ. ಸಿಬ್ಬಂದಿ ನಡೆಸಿದ ಅಹೋರಾತ್ರಿಯ ಪರಿಶ್ರಮದ ಪರಿಣಾಮ ಆಸ್ಪತ್ರೆಗಳು, ಸಿ.ಎಫ್.ಎಲ್.ಟಿ.ಸಿ.ಗಳು, ಕುಡಿಯುವ ನೀರಿನ ಸರಬರಾಜು ಯೋಜನೆ ಇತ್ಯಾದಿಗಳ ಸೇವೆಗಳಿಗೆ ವಿದ್ಯುತ್ ಸಂಪರ್ಕ ಖಚಿತಪಡಿಸಲಾಗಿದೆ. ಕೆಡುಕು ಸಂಭವಿಸಿದ ಪ್ರದೇಶಗಳಲಿ ದುರಸ್ತಿ ಕಾಮಗಾರಿಗಳು ಚುರುಕಿನಿಂದ ನಡೆಯುತ್ತಿವೆ ಎಂದು ಕಾಸರಗೋಡು ವಿದ್ಯುತ್ ವಲಯ ಸಹಾಯಕ ಪ್ರಧಾನ ಇಂಜಿನಿಯರ್ ತಿಳಿಸಿದರು.