ಕಣ್ಣೂರು: ಜನರ ತೀರ್ಪು ಕೇರಳದ ಇತಿಹಾಸವನ್ನು ಬದಲಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.ಈ ಯಶಸ್ಸಿನ ಕಾರಣರಾದ ಜನರಿಗೆ ಅಭಿನಂದನೆಗಳು, ಸರ್ಕಾರದ ಕ್ರಮಗಳನ್ನು ಗುರುತಿಸಿ ಈ ತೀರ್ಪು ನೀಡಲಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದರು.
ಕೇರಳ ತನ್ನ ರಾಜಕೀಯ ಇತಿಹಾಸವನ್ನು ಬದಲಿಸಿತು ಮತ್ತು ಮತ್ತೆ ಎಡರಂಗದ ಪರವಾಗಿ ತೀರ್ಪು ನೀಡಿತು. ಸಂತಸವನ್ನು ಜನರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಆದರೆ, ದೊಡ್ಡ ಸಂಭ್ರಮವನ್ನು ಆಚರಿಸಲು ಇದು ಸಮಯವಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಧ್ಯಮಗಳಿಗೆ ತಿಳಿಸಿದರು. ಕೋವಿಡ್ ವಿಸ್ತರಣೆಯ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗೆ ಪಕ್ಷ ಅನುಮತಿಸುವುದಿಲ್ಲ ಎಂದು ಅವರು ತಿಳಿಸಿದರು. ಸಾಮುದಾಯಿಕವಾಗಿ ನಾವು ತೆಗೆದುಕೊಳ್ಳುವ ಮುನ್ನೆಚ್ಚರಿಕೆಯನ್ನು ಸಾಮಾನ್ಯವಾಗಿ ಎಲ್ಲರೂ ಒಪ್ಪಿಕೊಳ್ಳಬೇಕು ಮತ್ತು ಕಾರ್ಯಗತಗೊಳಿಸಬೇಕು ಎಂದರು.
ದೊಡ್ಡ ಪ್ರಮಾಣದ ಕೋವಿಡ್ ಭೀತಿ ನಮ್ಮ ಮುಂದಿದೆ. ನಾಳೆಯ ಬಗ್ಗೆ ಏನೊಂದೂ ಹೇಳಲಾರದ ಸ್ಥಿತಿ ಇದೆ. ಆದಾಗ್ಯೂ, ಸ್ವಯಂ ನಿಯಂತ್ರಣವನ್ನು ಕಾಪಿಡಬೇಕು. ಜನಸಮೂಹ ಎಲ್ಲಿಯೂ ಸಭೆ ಸೇರಬಾರದು. ಅದರ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಸಿಎಂ ಹೇಳಿದರು.
ಸರ್ಕಾರ ವಿಧಿಸಿರುವ ನಿರ್ಬಂಧಗಳಿಗೆ ಭಯದಿಂದ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಇದನ್ನು ತಮ್ಮ ಸ್ವಂತ ಅಗತ್ಯವೆಂದು ಗಮನಿಸಿ, ನಿಯಂತ್ರಣದ ಭಾಗವಾಗಿರಬೇಕು. ದೇಶಾದ್ಯಂತ ಹಲವೆಡೆ ಮತ ಎಣಿಕೆಯ ಬಳಿಕ ವಿಜೋತ್ಸವಗಳು ನಡೆಯುತ್ತಿವೆ. ಆದರೆ, ಕೇರಳದ ಜನರು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು ಕಾನೂನು ಪಾಲಿಸುವಲ್ಲಿ ಜವಾಬ್ದಾರರಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಿಎಂ ಹೇಳಿದರು.