HEALTH TIPS

ವಿಧಾನಸಭೆಗೆ ಮೊದಲ ಬಾರಿಗೆ; ಸಭಾಪತಿಯಾಗಿ ಆಯ್ಕೆಯಾದ ಎಂ.ಬಿ. ರಾಜೇಶ್

               ತಿರುವನಂತಪುರ: ಒಂದು ದಶಕದಿಂದ ಸಂಸತ್ ಸದಸ್ಯರಾಗಿ ಅನುಭವಿಯಾದ ಎಂ.ಬಿ.ರಾಜೇಶ್ ಅವರು ಕೇರಳದ 15 ನೇ ವಿಧಾನಸಭೆಯ ಸ್ಪೀಕರ್ ಆಗಿ ನಿನ್ನೆ ಆರಿಸಲ್ಪಟ್ಟರು.  ರಾಜೇಶ್ ತನ್ನ ವಿದ್ಯಾರ್ಥಿ ದಿನದಿಂದಲೂ ಸಾಂಸ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಸ್ಪೀಕರ್ ಸ್ಥಾನಕ್ಕೆ ಬಡ್ತಿ ಪಡೆದಿರುವರು.

                   ಅವರು 1971ರ ಮಾರ್ಚ್ 12 ರಂದು ಬಾಲಕೃಷ್ಣನ್ ನಾಯರ್ ಮತ್ತು ರಮಣಿ ದಂಪತಿಗಳ ಪುತ್ರನಾಗಿ ಜನಿಸಿದರು. ಎಂಬಿ ರಾಜೇಶ್ ಒಟ್ಟಪಾಲಂನ ಎಲ್.ಎಸ್.ಎಸ್. ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ತಿರುವನಂತಪುರದ ಕಾನೂನು ಅಕಾಡೆಮಿಯಿಂದ ಕಾನೂನು ಪದವಿ ಪಡೆದಿದ್ದಾರೆ. ಎಸ್‍ಎಫ್‍ಐ ಮೂಲಕವೇ ಇವರು ರಾಜಕೀಯಕ್ಕೆ ಪ್ರವೇಶಿಸಿದ್ದರು. .

                ಅವರು ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ, ಡಿವೈಎಫ್‍ಐ ರಾಜ್ಯ ಅಧ್ಯಕ್ಷ ಮತ್ತು ಅಖಿಲ ಭಾರತ ಅಧ್ಯಕ್ಷ ಹುದ್ದೆಗಳನ್ನು ಅಲಂಕರಿಸಿದ್ದರು. ವಿದ್ಯಾರ್ಥಿ ಸಂಘದ ಸಂದರ್ಭದಲ್ಲಿ ಒಟ್ಟಪಾಲಂ ಬ್ಲಾಕ್ ಪಂಚಾಯತಿಗೆ ಮೊದಲ ಬಾರಿ  ಆಯ್ಕೆಯಾದರು. 2009 ರ ಲೋಕಸಭಾ ಚುನಾವಣೆಯಲ್ಲಿ ಪಾಲಕ್ಕಾಡ್‍ನಿಂದ ತಮ್ಮ ಮೊದಲ ಅವಧಿಯಲ್ಲಿ ಗೆದ್ದ ಎಂ.ಬಿ.ರಾಜೇಶ್ ಅವರು 2014 ರಲ್ಲಿ ಮತ್ತೆ ಆಯ್ಕೆಯಾಗಿದ್ದರು.  ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದು ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದರು. 10 ವರ್ಷಗಳ ಕಾಲ ಸಂಸತ್ತಿನಲ್ಲಿ ಪಾಲಕ್ಕಾಡ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ರಾಜೇಶ್ ಮೂರನೇ ಸುತ್ತಿನಲ್ಲಿ ಕಾಂಗ್ರೆಸ್ ನ ವಿ.ಕೆ.ಶ್ರೀಕಣ್ಣನ್ ವಿರುದ್ಧ ಪರಾಭವಗೊಂಡರು. 

                 ಆದರೆ ವಿಧಾನಸಭಾ ಚುನಾವಣೆಯಲ್ಲಿ ಅವರು ತ್ರಿತಲದಲ್ಲಿ ಯುಡಿಎಫ್ ಅಭ್ಯರ್ಥಿ ವಿ.ಟಿ.ಬಲರಾಂ ವಿರುದ್ಧ ಸ್ಪರ್ಧಿಸಿದ್ದರು. ಮತ್ತು ಜಯಗಳಿಸಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. ಕಾಲಡಿ ಸಂಸ್ಕøತ ವಿಶ್ವವಿದ್ಯಾಲಯದಲ್ಲಿ. ಅವರ ಪತ್ನಿ ನಿನಿತಾ ಕರಿಚ್ಚೇರಿ ಪ್ರಾಧ್ಯಾಪಕಿಯಾಗಿದ್ದಾರೆ. ಮಕ್ಕಳು ಪ್ಲಸ್ ಟು ವಿದ್ಯಾರ್ಥಿ ನಿರಂಜನ ಮತ್ತು ನಾಲ್ಕನೇ ತರಗತಿ ವಿದ್ಯಾರ್ಥಿನಿ ಪ್ರಿಯದತ್ತ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries