ಕಾಸರಗೋಡು: ಕೋವಿಡ್ ದ್ವಿತೀಯ ಅಲೆಯನ್ನು ಎದುರಿಸುವ ನಿಟ್ಟಿನಲ್ಲಿ ನೀಲೇಶ್ವರ ನಗರಸಭೆ ವಾರ್ಡ್ ಗಳಲ್ಲಿ ಕ್ಲಸ್ಟರ್ ಗಳನ್ನು ರಚಿಸಿ ಪ್ರತ್ಯೇಕ ನಿಗಾ ನಡೆಸಲು ತೀರ್ಮಾನಿಸಲಾಗಿದೆ.
ನಗರಸಭೆಯ ಕೋರ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ನಡೆಸಲಾಗಿದೆ.
10 ಪಲ್ಸ್ ಆಕ್ಸೀಮೀಟರ್ ಖರೀದಿಸಿ ವಾರ್ಡ್ ಗಳಲ್ಲಿ ಅಗತ್ಯವಿರುವವರಿಗೆ ನೀಡಲಾಗುವುದು. ವಿವಿಧ ವಾರ್ಡ್ ಗಳಲ್ಲಿ ವಾಸವಾಗಿರುವ ಇನ್ನಿತರ ಕರ್ತವ್ಯಗಳಲ್ಲಿ ತೊಡಗಿಕೊಳ್ಳದೇ ಇರುವ ಸರಕಾರಿ ಸಿಬ್ಬಂದಿಯನ್ನು ಕೋವಿಡ್ ಪ್ರತಿರೋಧ ಚಟುವಟಿಕೆಗಳಲ್ಲಿ ಬಳಸಿಕೊಳ್ಳಲಾಗುವುದು. ಪಾಸಿಟಿವ್ ರೋಗಿಗಳ ಸಂಶೈ ನಿವಾರಣೆಗಾಗಿ ನಗರೆಸಭೆ ಹೆಲ್ಪ್ ಡೆಸ್ಕ್ ಗಳಲ್ಲಿ ಆಸ್ಪತ್ರೆಗಳ ಹೊಣೆಗಾರಿಕೆ ಇಲ್ಲದ ವೈದ್ಯರನ್ನು ನೇಮಿಸಲು ತೀರ್ಮಾನಿಸಲಾಗಿದೆ.
ಪಾಲಾತ್ತಡಂ ಕಣ್ಣೂರು ವಿವಿ ಕ್ಯಾಂಪಸ್ ನ ಮಹಿಳಾ ಹಾಸ್ಟೆಲ್ ನ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ಡಾಮಿಸಲರಿ ಕೇರ್ ಸೆಂಟರ್ ಅತ್ಯುತ್ತಮ ಕಾರ್ಯಾಚರಣೆ ನಡೆಸುತ್ತಿದೆ ಎಂದು ಸಭೆ ಅವಲೋಕನ ನಡೆಸಿದೆ. ಕೋವಿಡ್ ರೋಗಿಗಳಿಗೆ ಪ್ರತ್ಯೇಕ ಒ.ಪಿ. ಕೂಡ ಇಲ್ಲಿ ಚಟುವಟಿಕೆ ನಡೆಸುತ್ತಿದೆ. ಸಿ.ಎಫ್.ಎಲ್.ಟಿ.ಸಿ.ಯಲ್ಲಿ ಈಗಾಗಲೇ 101 ಮಂದಿ ರೋಗಿಗಳಿಗೆ ದಾಖಲಾತಿ ಚಿಕಿತ್ಸೆ ನೀಡಲಾಗಿದೆ. 55 ಮಂದಿ ಗುಣಮುಖರಾಗಿದ್ದಾರೆ ಎಂದು ತಿಳಿಸಲಾಗಿದೆ.
ಅಧ್ಯಕ್ಷೆ ಟಿ.ವಿ.ಶಾಂತಾ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯೀ ಸಮಿತಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.