ಕಾಸರಗೋಡು: ಪನತ್ತಡಿ ಗ್ರಾಮ ಪಂಚಾಯತ್ ನ ಬಳಾಂತೋಡು ಶಾಲೆಯಲ್ಲಿ ಚಟುವಟಿಕೆ ನಡೆಸುತ್ತಿರುವ ಡೊಮಿಸಿಲರಿ ಕೇರ್ ಸೆಂಟರ್ ಗೆ ಪನತ್ತಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕರು ಮತ್ತು ಇತರ ಸಿಬ್ಬಂದಿಯ ಕೊಡುಗೆಯಾಗಿರುವ 25 ಸಾವಿರ ರೂ. ಹಸ್ತಾಂತರಿಸಲಾಯಿತು. ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಸನ್ನಾ ಪ್ರಸಾದ್ ಅವರಿಗೆ ಶಾಲೆಯ ಮುಖ್ಯ ಶಿಕ್ಷಕ ರಮೇಶನ್, ಪ್ರಾಂಶುಪಾಲ ಗೋವಿಂದನ್ ಮೊಬಲಗು ಹಸ್ತಾಂತರಿಸಿದರು. ಪಂಚಾಯತ್ ನ ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷರಾದ ಸುಪ್ರಿಯಾ ಶಿವದಾಸನ್, ಲತಾ ಅರವಿಂದನ್, ಸದಸ್ಯ ವೇಣುಗೋಪಾಲನ್ ಕೆ.ಕೆ., ಸಿ.ಡಿ.ಎಸ್. ಅಧ್ಯಕ್ಷೆ ಮಾಧವಿ ರಾಜನ್, ಶಿಕ್ಷಕರು ಉಪಸ್ಥಿತರಿದ್ದರು.