ಕಾಸರಗೋಡು: ಕಣ್ಣೂರು ಚೆಂಗಳಾಯಿ ಗ್ರಾಮ ಪಂಚಾಯಿತಿ ನಿವಾಸಿ, ಕಾಸರಗೋಡು ಡಿವೈಎಸ್‍ಪಿ ಪಿ.ಪಿ ಸದಾನಂದನ್ ಅವರು ತಮ್ಮ ಸ್ವಂತ ಮನೆಯನ್ನು ಕೋವಿಡ್ ಡೊಮಿಸಿಲರಿ ಕೇರ್ ಸೆಂಟರ್‍ಗಾಗಿ ಬಿಟ್ಟುಕೊಡುವ ಮೂಲಕ ಸೇವಾತತ್ಪರತೆ ಮೆರೆದಿದ್ದಾರೆ.
ಚೆಂಗಳಾಯಿ ಗ್ರಾಮ ಪಂಚಾಯಿತಿ ಕರೊನಾ ರೋಗಿಗಳಿಗಾಗಿ ಡೊಮಿಸಿಲರಿ ಕೇರ್ ಸೆಂಟರ್ ನಡೆಸುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಕೋವಿಡ್ ಬಾಧಿತರಿಗೆ ಅವರ ಮನೆಗಳಲ್ಲಿ ಕ್ವಾರಂಟೈನ್‍ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯಿಲ್ಲದಿದ್ದಲ್ಲಿ, ಅವರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವಂತೆ ಸರ್ಕಾರದ ನಿರ್ದೇಶವಿರುವುದರಿಂದ ಎಲ್ಲ ಪಂಚಾಯಿತಿಗಳಲ್ಲೂ ಡೊಮಿಸಿಲರಿ ಕೇರ್ ಸೆಂಟರ್ ಆರಂಭಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವ ಇಚ್ಛೆಯಿಂದ ಪಂಚಾಯಿತಿಗೆ ವಹಿಸಿಕೊಟ್ಟಿದ್ದಾರೆ.