HEALTH TIPS

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪದೇ ಪದೇ ಆಪ್‌ ಕ್ರಾಷ್‌ ಆಗ್ತಿದೆಯಾ..? ಇಲ್ಲಿದೆ ಪರಿಹಾರ..!

         ನೀವು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಸುವಾಗ ಅಪ್ಲಿಕೇಷನ್‌ ಕ್ರಾಷ್‌ ಆಗುವ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ. ಈ ಅನುಭವ ನಿಮಗೆ ಮಾತ್ರ ಆಗುತ್ತಿಲ್ಲ. ಜಾಗತಿಕವಾಗಿ ಈ ಸಮಸ್ಯೆ ಎದುರಾಗಿದ್ದು, ಗೂಗಲ್‌ ಮತ್ತು ಇಂಟರ್‌ನೆಟ್‌ ತಜ್ಞರು ಈಗಾಗಲೇ ಈ ಸಮಸ್ಯೆಯನ್ನು ಬಗೆಹರಿಸಲು ಕಾರ್ಯನಿರ್ವಹಿಸುತ್ತಿದ್ದಾರೆ.


        ಆಂಡ್ರಾಯ್ಸ್‌ ಸಿಸ್ಟಮ್‌ ವೆಬ್‌ ವೀವ್‌ ಎಂಬ ಸಿಸ್ಟಮ್‌ ಕಂಪೊನೆಂಟ್‌ನಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಆಂಡ್ರಾಯ್ಡ್‌ ಸಿಸ್ಟಮ್‌ ವೆಬ್‌ ವೀವ್‌ ವೆಬ್‌ ಮಾಹಿತಿಯನ್ನು ಆಪ್‌ನಲ್ಲಿ ತೋರಿಸುವ ಕೆಲಸವನ್ನು ಮಾಡುತ್ತಿತ್ತು. ಈಗಾಗಲೇ ಸ್ಯಾಮ್‌ಸಂಗ್‌ ಟ್ವಿಟ್ಟರ್‌ನಲ್ಲಿ ಈ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಲಾಗಿದೆ ಎಂದು ಹೇಳಿ, ಹೇಗೆ ಫಿಕ್ಸ್‌ ಮಾಡಬಹುದು ಎಂಬುದನ್ನು ತಿಳಿಸಿದೆ. ಇದನ್ನೇ, ಬೇರೆ ಸ್ಮಾರ್ಟ್‌ಫೋನ್‌ ಬಳಕೆದಾರರು ಬಳಸಬಹುದು.

 


 

      ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಗೂಗಲ್‌ ಈಗಾಗಲೇ ಕಾರ್ಯಾರಂಭ ಮಾಡಿದೆ. ದಿ ವರ್ಜ್‌ ವರದಿ ಪ್ರಕಾರ ವೆಬ್‌ ವೀವ್‌ನಿಂದ ಕೆಲವು ಬಳಕೆದಾರರ ಅಪ್ಲಿಕೇಷನ್‌ ಕ್ರಾಷ್‌ ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಸಮಸ್ಯೆಯನ್ನು ಬಗೆಹರಿಸಲು ನಾವು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಗೂಗಲ್‌ ಹೇಳಿದೆ.

       ಈ ಸಮಸ್ಯೆ ಜಾಗತಿಕವಾಗಿದ್ದು, ಗೂಗಲ್‌ ಮಾಲೀಕತ್ವದ ಜಿಮೇಲ್‌ ಹಾಗೂ ಗೂಗಲ್‌ ಪೇ ಆಪ್‌ಗಳು ಕೂಡ ಇದರಿಂದ ಹೊರತಾಗಿಲ್ಲ ಎಂದು ಹೇಳಲಾಗಿದೆ. ಕಳೆದ ಕೆಲವು ತಿಂಗಳಿನಿಂದ ಕಾಡುತ್ತಿರುವ ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿರುವುದಾಗಿ ಗೂಗಲ್‌ ಫೆಬ್ರವರಿಯಲ್ಲಿ ತಿಳಿಸಿತ್ತು.

ವಿಯರ್‌ ಒಎಸ್‌ನಲ್ಲಿ ʼಹೇ ಗೂಗಲ್‌ʼ ಗೂಗಲ್‌ ಅಸಿಸ್ಟಂಟ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಿಲ್ಲ. ಸ್ಮಾರ್ಟ್‌ವಾಚ್‌ಗಳಲ್ಲಿ ಆಂಡ್ರಾಯ್ಡ್‌ ಆಧಾರಿತ ಒಎಸ್‌ ಇದಾಗಿದ್ದು, ಈ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಿ ಹೊಸ ಅಪ್‌ಡೇಟ್‌ ಬಿಡುಗಡೆ ಮಾಡುವುದಾಗಿ ಗೂಗಲ್‌ ಕಳೆದ ತಿಂಗಳು ಹೇಳಿತ್ತು. ಕೇವಲ ಹೊಸ ಅಪ್‌ಡೇಟ್‌ ಮಾತ್ರವಲ್ಲದೇ ಎಲ್ಲ ರೀತಿಯ ಫೀಚರ್‌ಗಳನ್ನು ಉನ್ನತೀಕರಿಸುವುದಾಗಿ ತಿಳಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries