ಕಾಸರಗೋಡು: ದೂರವಾಣಿ ಮೂಲಕ ಮಹಿಳೆಯರು ಅಹವಾಲು ಸಲ್ಲಿಸಲು ರಾಜ್ಯ ಮಹಿಳಾ ಆಯೋಗ ಅವಕಾಶ ಒದಗಿಸಿದೆ. ಆಯೋಗ ನೇಮಿಸಿರುವ ಕೌನ್ಸಿಲರ್ ಗಳು ದೂರವಾಣಿ ಮೂಲಕ ಅಹವಾಲು ಆಲಿಸುವರು. ತುರ್ತು ದಾಖಲಿಸಬೇಕಾದ ಕೇಸುಗಳು, ಆಯೋಗದ ಸದಸ್ಯರು ನೇರತವಾಗಿ ಆಲಿಸಬೇಕಾದ ಅಹವಾಲುಗಳು ಇತ್ಯಾದಿಗಳಿಗೆ ಅದೇ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲಾಗುವುದು. ಕೋವಿಡ್ ಸೋಂಕು ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಗರಿಷ್ಠ ಮಟ್ಟದಲ್ಲಿ ಸಮಾಜಿಕ ಸಂಪರ್ಕ ಕೈಬಿಟ್ಟು, ಅನಿವಾರ್ಯವಾಗಿ ಈ ಸೌಲಭ್ಯ ಏರ್ಪಡಿಸಲಾಗಿದೆ ಎಂದು ಆಯೋಗದ ಅಧ್ಯಕ್ಷೆ ಎಂ.ಸಿ.ಜೋಸೆಫೈನ್ ತಿಳಿಸಿದರು.
ಸಂಪರ್ಕಿಸಬಹುದಾದ ಜಿಲ್ಲಾ ಮಟ್ಟಗಳ ದೂರವಾಣಿ ಸಂಖ್ಯೆಗಳು : ಕಾಸರಗೋಡು-9539504440, 9072392951, ಕಣ್ಣೂರು-7356570164, ವಯನಾಡು-9745643015, 9496436359, ಕೋಯಿಕೋಡ್-9947394710, ಮಲಪ್ಪುರಂ-7736152307, ಪಾಲಕ್ಕಾಡ್-7907971699, ತ್ರಿಶೂರು-9526114878, 9539401554, ಎರ್ನಾಕುಲಂ-9495081142, 9746119911, ಇಡುಕ್ಕಿ-9645733967, 7025148689, ಕೋಟ್ಟಯಂ-9496572687, 8075499480,
ಆಲಪ್ಪುಳ-9446455657, ಪತ್ತನಂತಿಟ್ಟ-9847528017, ಕೊಲ್ಲಂ-9995718666, 9495162057, 9447063439, ತಿರುವನಂತಪುರಂ-9495124586, 9447865209.