ಕೊಚ್ಚಿ: ಮುಖ್ಯಮಂತ್ರಿಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಸಂದೇಶ ನೀಡಿದ್ದ ಹೆಸರಲ್ಲಿ ಶಿಸ್ತು ಕ್ರಮವನ್ನು ಎತ್ತಿಹಿಡಿಯಲಾಗುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಖಾಸಗಿ ವಾಟ್ಸಾಪ್ ಗ್ರೂಪ್‍ನಲ್ಲಿ ಸರ್ಕಾರ ಮತ್ತು ಸಿಎಂ ವಿರುದ್ಧ ಸಂದೇಶ ಹಂಚಿಕೊಂಡಿದ್ದಕ್ಕಾಗಿ ಶಿಸ್ತು ಕ್ರಮವನ್ನು ರದ್ದುಗೊಳಿಸಲು ಕಣ್ಣೂರಿನ ಕೆಎಸ್‍ಇಬಿ ಉದ್ಯೋಗಿ ಪಿ.ವಿ. ರತೀಶ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ಈ ತೀರ್ಪು ನೀಡಲಾಗಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜೀವನದ ಹಕ್ಕಿನ ಭಾಗವಾಗಿ ಈಗ ಬಳಸಲಾಗುತ್ತದೆ. ಆದ್ದರಿಂದ ಅಂತಹ ಉಲ್ಲೇಖಗಳ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳಲಾಗದು. ಕೆಎಸ್‍ಇಬಿ ಸರ್ಕಾರಿ ಇಲಾಖೆಯಲ್ಲ. ಅದೊಂದು ಕಂಪನಿಯಾಗಿದೆ. ಸೋಷಿಯಲ್ ಮೀಡಿಯಾ ಮೂಲಕ ಸರ್ಕಾರ ಮತ್ತು ಮುಖ್ಯಮಂತ್ರಿಯ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಈ ಸಂಸ್ಥೆಯ ಅಧಿಕಾರಿಯ ವಿರುದ್ಧ ಹೇಗೆ ಶಿಸ್ತು ಕ್ರಮ ಕೈಗೊಳ್ಳಬಹುದು ಎಂದು ಏಕ ಸದಸ್ಯ ಪೀಠ ಇಂದು ಕೇಳಿದೆ.
ಅರ್ಜಿದಾರರ ವಿರುದ್ಧದ ವಿಚಾರಣೆಯನ್ನು ಹೈಕೋರ್ಟ್ ರದ್ದುಪಡಿಸಿತು. ಮತ್ತು ಕೆಎಸ್.ಇಬಿ ನೌಕರನನ್ನು ಈವರೆಗೆ ಅಮಾನತುಗೊಳಿಸಿದ್ದ ಸಮಯವನ್ನೂ ಕರ್ತವ್ಯದ ದಿನವೆಂದು ಪರಿಗಣಿಸುವಂತೆ ನಿರ್ದೇಶಿಸಿತು.
ವಾಟ್ಸಾಪ್ ಸಂದೇಶಕ್ಕಾಗಿ 2016ರ ಸೆಪ್ಟೆಂಬರ್ 29 ರಿಂದ ಡಿಸೆಂಬರ್ 19 ರವರೆಗೆ ಕೆಎಸ್ ಇಬಿ ನೌಕರನಾದ ಪಿ.ವಿ.ರತೀಶ್ ಅವರನ್ನು ಅಮಾನತುಗೊಳಿಸಲಾಗಿತ್ತು. ಅಮಾನತುಗೊಳಿಸಿದ್ದ ಅವಧಿಯನ್ನು ಬಳಿಕ ರಜೆ ಎಂದು ಲೆಕ್ಕಹಾಕಲಾಯಿತು. ಬಳಿಕ ಅರ್ಜಿದಾರರು ಹೈಕೋರ್ಟ್‍ನನ್ನು ಸಂಪರ್ಕಿಸಿದ್ದರು.