ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣಕ್ಕೆ ಕಾರಣವಾದ ಚುನಾವಣಾ ಆಯೋಗದ ವಿರುದ್ಧ ಟೀಕೆಗಳನ್ನು ಮಾಡಿರುವ ಮದ್ರಾಸ್ ಹೈಕೋರ್ಟ್ ವಾದಗಳನ್ನು ತಳ್ಳಿ ಹಾಕಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ ಮತ್ತು ನ್ಯಾಯಾಂಗ ವಿಚಾರಣೆಯ ಅವಲೋಕನಗಳನ್ನು ವರದಿ ಮಾಡುವ ಮಾಧ್ಯಮಗಳಿಗೆ ತಡೆ ನೀಡಬೇಕೆಂದು ಆಯೋಗದ ಮನವಿಯನ್ನು ಕೋರ್ಟ್ ವಜಾಮಾಡಿದೆ.
ಆದಾಗ್ಯೂ, ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಹೈಕೋರ್ಟ್‌ನ ಹೇಳಿಕೆ "ಕಟುವಾಗಿದ್ದವು" ಎಂದು ಒಪ್ಪಿಕೊಂಡಿದ್ದಾರೆ. ಆದರೆ ಅವು ನ್ಯಾಯಾಂಗ ಆದೇಶದ ಭಾಗವಾಗುವುದಿಲ್ಲ ಎಂದು ಹೇಳಿ ಅದನ್ನು ಅಲ್ಲಗೆಳೆಯಲಿಲ್ಲ, ನ್ಯಾಯಾಲಯದ ವಿಚಾರಣೆಯನ್ನು ವರದಿ ಮಾಡಲು ಮಾಧ್ಯಮಗಳಿಗೆ ಹಕ್ಕಿದೆ, ಆದರೆ ನ್ಯಾಯಪೀಠದ, "ಕಟು ಟೀಕೆಗಳನ್ನು ತಪ್ಪಾಗಿ ಅರ್ಥೈಸುವ ಸಾಧ್ಯತೆಯಿದೆ" ಎಂದೂ ಹೇಳಿದರು.
ಕೋವಿದ್ ಅವಧಿಯಲ್ಲಿ ಮಾಡಿದ ಶ್ಲಾಘನೀಯ ಕಾರ್ಯಗಳಿಗಾಗಿ ಸರ್ವೋಚ್ಚ ನ್ಯಾಯಾಲಯವು ಹೈಕೋರ್ಟ್ ಅನ್ನು ಶ್ಲಾಘಿಸಿದೆ.ಸಾಂಕ್ರಾಮಿಕ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದೆ. ನ್ಯಾಯಮೂರ್ತಿ ಎಂ.ಆರ್ ಶಾ ಅವರನ್ನೂ ಒಳಗೊಂಡ ನ್ಯಾಯಪೀಠ, ವಿಚಾರಣೆಯ ಸಂದರ್ಭದಲ್ಲಿ ಮಾಡಿದ ಅವಲೋಕನಗಳನ್ನು ವರದಿ ಮಾಡುವುದನ್ನು ಮಾಧ್ಯಮಗಳು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ. ಹೈಕೋರ್ಟ್ ಅವಲೋಕನಗಳನ್ನು ಮಾಡುವುದನ್ನು ತಡೆಯುವುದು ಅಥವಾ ಮಾಧ್ಯಮಗಳ ವರದಿ ತಡೆಯುವುದನ್ನು ಸಾಧ್ಯವಿಲ್ಲ." ಎಂದಿದೆ.
ನ್ಯಾಯಾಂಗ ವಿಚಾರಣೆಯನ್ನು ವರದಿ ಮಾಡುವುದನ್ನು ತಡೆಯುವುದಾದರೆ ಅದು ಒಳ್ಳೆಯ ಬೆಳವಣಿಗೆಯಲ್ಲ, ಮಾಧ್ಯಮಗಳ ವಿಕಾಸಗೊಳ್ಳುತ್ತಿರುವ ತಂತ್ರಜ್ಞಾನಕ್ಕೆ ನ್ಯಾಯಾಲಯಗಳು ಕಣ್ಣಾಗಿರಬೇಕು, ಮದ್ರಾಸ್ ಹೈಕೋರ್ಟ್‌ನ ವೀಕ್ಷಣೆಯ ವಿರುದ್ಧ ಚುನಾವಣಾ ಆಯೋಗದ ಮೇಲ್ಮನವಿಯ ಮೇರೆಗೆ ಈ ತೀರ್ಪು ಹೊರಬಂದಿದೆ. ಸಾಂಕ್ರಾಮಿಕ ರೋಗದ ಎರಡನೇ ಅಲೆ ಸಮಯದಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣಕ್ಕೆ ಹೈಕೋರ್ಟ್ ಏಪ್ರಿಲ್ 26 ರಂದು ಚುನಾವಣಾ ಆಯೋಗವನ್ನು ದೂಷಿಸಿತ್ತು, ಇದು ವೈರಲ್ ಕಾಯಿಲೆಯ ಹರಡುವಿಕೆಗೆ "ಏಕಮೇವ" ಕಾರಣವಾಗಿದೆ, ಇದು ಅತ್ಯಂತ "ಬೇಜವಾಬ್ದಾರಿ ಸಂಸ್ಥೆ" ಮತ್ತು ಅದರ ಅಧಿಕಾರಿಗಳ ಮೇಲೆ ಕೊಲೆ ಆರೋಪ ಹೊರಿಸಬಹುದು ಎಂದಿತ್ತು.