ಕಾಸರಗೋಡು: ರಾಜ್ಯ ಹೋಮಿಯೋಪತಿ ಇಲಾಖೆ ವ್ಯಾಪ್ತಿಯ ಮಕ್ಕಳ ಕಲಿಕೆ ಸ್ವಭಾವ ವಿಕಲತೆ ನಿವಾರಣೆ ಯೋಜನೆ "ಸದ್ಗಮಯ"ದ ಕಾಸರಗೋಡು ಯೂನಿಟ್ ಅಂತಾರಾಷಟ್ರೀಯ ಮಾತೃದಿನ ಸಂಬಂಧ ಅಮ್ಮನಿಗೊಂದು ಪ್ರೀತಿಯ ಸಂದೇಶ ಎಂಬ ಹೆಸರಿನಲ್ಲಿ ಶುಭಾಶಯ ಪತ್ರ( ಗ್ರೀಟಿಂಗ್ ಕಾರ್ಡ್) ತಯಾರಿ ಸ್ಪರ್ಧೆ ನಡೆಸಲಿದೆ. 15 ವರ್ಷಕ್ಕಿಂತ ಕೆಳಗಿನ ವಯೋಮಾನದ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.ಮಮಕ್ಕಳು ತಮ್ಮ ತಾಯಿಗೆ ನೀಡುವ ಶುಭಾಶಯ ಪತ್ರ ಸ್ಪರ್ಧೆಗೆ ಕಳುಹಿಸಬೇಕು. ಒಬ್ಬರು ಒಂದು ಪತ್ರ ಮಾತ್ರ ಕಳುಹಿಸಬೇಕು. ಮೇ 12ರಂದು ಸಂಜೆ 4 ಗಂಟೆಗೆ ಮುಂಚಿತವಾಗಿ ಕಾರ್ಡ್ ಸದ್ಗಮಯ ಯೋಜನೆಯ ವಾಟ್ಸ್ ಆಪ್ ನಂಬ್ರಗಳಾದ 9072900546, 7559832817 ಕ್ಕೆ ಕಳುಹಿಸಬೇಕು.