ದೇಹಕ್ಕೆ ಅಗತ್ಯ ಪೋಷಕಾಂಶಗಳು ಸಿಗಲು ಸೊಪ್ಪು, ತರಕಾರಿಗಳ ಸೇವನೆ ಕಡ್ಡಾಯ ಹಾಗೂ ಅತ್ಯಗತ್ಯ. ಪ್ರತಿಯೊಂದು ತರಕಾರಿಯೂ ತನ್ನದೇ ಆದ ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಪೂರೈಸುತ್ತದೆ.
ಆದರೆ ನಿಮಗೆ ಗೊತ್ತೆ?, ಈ ಒಂದು ತರಕಾರಿಯ ಸೇವನೆಯ ನಂತರ ಈ ಎರಡನ್ನು ಸೇವಿಸಿದರೆ ನಿಮ್ಮ ದೇಹದಲ್ಲಿ ವಿಷ ಉತ್ಪತಿ ಆಗುತ್ತದೆ ಅಂತೆ. ಹೌದು ಹೀಗೆಂದು ವಿಜ್ಞಾನಿಗಳು ಹೇಳಿದ್ದಾರೆ.
ಬುದ್ಧಿವಂತಿಕೆ ಹೆಚ್ಚಾಗಲು ಸೇವಿಸುವ, ಅನೇಕರ ನೆಚ್ಚಿನ ಹಸಿರು ತರಕಾರಿ ಬೆಂಡೆಕಾಯಿ ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ. ಇದಲ್ಲಿರುವ ಪ್ರೋಟೀನ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಕೊಬ್ಬು, ಫೈಬರ್, ರಂಜಕ, ಕಬ್ಬಿಣ, ಪೊಟ್ಯಾಶಿಯಂ, ಮೆಗ್ನೀಶಿಯಂ, ಸೋಡಿಯಂ, ತಾಮ್ರ ನಮ್ಮ ದೇಹಕ್ಕೆ ತುಂಬಾ ಅಗತ್ಯವಿರುವ ಪೋಷಕಾಂಶಗಳು.
ಆದರೆ, ಬೆಂಡೆಕಾಯಿ ಸೇವಿಸಿದ ನಂತರ ನಾವು ಮಾಡುವ ಈ ತಪ್ಪಿನಿಂದಾಗಿ ಇದು ನಮಗೇ ವಿಷವಾಗಬಹುದು. ಬೆಂಡೆಕಾಯಿ ಸೇವಿಸಿ ನಂತರ ಎಂದಿಗೂ ಮರೆತು ಸಹ ಮೂಲಂಗಿ ಹಾಗೂ ಹಾಗಲಕಾಯಿ ಸೇವಿಸಲೇಬೇಡಿ.
ಯಾಕೆ?, ಇದರಿಂದ ಏನಾಗುತ್ತದೆ ಎಂದು ಮುಂದೆ ತಿಳಿಸಿದ್ದೇವೆ:
ಮೂಲಂಗಿ
ಬೆಂಡೆಕಾಯಿಯೊಂದಿಗೆ ಮೂಲಂಗಿಯನ್ನು ತಿನ್ನಬೇಡಿ. ಬೆಂಡೆಕಾಯಿ ಜತೆ ನೀವು ಮೂಲಂಗಿಯನ್ನು ಸಲಾಡ್ ರೂಪದಲ್ಲಿ ಸಹ ಸೇವಿಸುವ ಪ್ರಯತ್ನ ಬೇಡ. ಕಾರಣ ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಬೆಂಡೆಕಾಯಿ ಜತೆಗೆ ಮೂಲಂಗಿಯನ್ನು ಸೇವಿಸುವುದರಿಂದ ನಿಮ್ಮ ತ್ವಚೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಚ್ಚರ!.
ಅದರಲ್ಲೂ ಇಂತಹ ತಪ್ಪನ್ನು ಮತ್ತೆ ಮತ್ತೆ ಮಾಡಿದರೆ, ಇದರ ಪರಿಣಾಮ ನಿಮ್ಮ ಮುಖ ಮತ್ತು ದೇಹದ ಮೇಲೆ ಕೆಲವು ಕಲೆಗಳನ್ನು ಉಂಟುಮಾಡುತ್ತದೆ, ಅಷ್ಟೇ ಅಲ್ಲದೆ ಈ ಕಲೆಗಳು ನೀವು ಯಾವುದೇ ಚಿಕಿತ್ಸೆ ಪಡೆದರೂ ಹೋಗುವುದಿಲ್ಲ. ತ್ವಚೆಯ ಕಾಳಜಿ ಮಾಡುವವರಂತೂ ಯಾರೂ ಇಂಥ ದುಸ್ಸಾಹಸಕ್ಕೆ ಕೈ ಹಾಕಬೇಡಿ.
ಹಾಗಲಕಾಯಿ
ಬೆಂಡೆಕಾಯಿ ಸೇವಿಸಿದ ತಕ್ಷಣ ಹಾಗಲಕಾಯಿ ಸಹ ಸೇವಿಸಲೇಬೇಡಿ. ಈ ತರಕಾರಿಗಳ ಮಿಶ್ರಣ ನಿಮ್ಮ ಹೊಟ್ಟೆಯಲ್ಲಿ ವಿಷವಾಗಿ ಬದಲಾಗಬಹುದು. ಬೆಂಡೆಕಾಯಿ ನಂತರ ಹಾಗಲಕಾಯಿ ಸೇವನೆ ವಿಷವನ್ನು ಸೃಷ್ಟಿಸುತ್ತದೆ, ಇದು ಕೆಲವೊಮ್ಮೆ ಮನುಷ್ಯನ ಸಾವಿಗೂ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಆದ್ದರಿಂದ, ಬೆಂಡೆಕಾಯಿ ತಿಂದ ಕೂಡಲೇ ಹಾಗಲಕಾಯಿಯನ್ನು ಯಾವುದೇ ಕಾರಣಕ್ಕು ಸೇವಿಸಬೇಡಿ.