ಕಾಸರಗೋಡು: ಆಹಾರ ಇಲಾಖೆ ವ್ಯವಸ್ಥೆ, ಚಟುವಟಿಕೆ ಕುರಿತು ಸಾರ್ವಜನಿಕರಿಂದ ನೇರವಾಗಿ ಅಭಿಪ್ರಾಯ, ಸಲಹೆ ಪಡೆಯಲು ಸಚಿವ ನ್ಯಾಯವಾದಿ ಜಿ.ಆರ್.ಅನಿಲ್ ಬಯಸಿದ್ದಾರೆ. ಲಾಕೌ ಡೌನ್ ಅವಧಿಯಲ್ಲಿ ದೂರವಾಣಿ ಯಾ ಆನ್ ಲೈನ್ ಮೂಲಕ ಜನತೆಯೊಂದಿಗೆ ಈ ಸಂಬಂಧ ಸಂವಾದ ನಡೆಸಲಿದ್ದಾರೆ. ಇದರ ಅಂಗವಾಗಿ ಮಂಗಳವಾರ (ಮೇ 25) ದಿಂದ ಶುಕ್ರವಾರ (ಮೇ 28) ವರೆಗೆ ಮಧ್ಯಾಹ್ನ 2 ಗಂಟೆಯಿಂದ 3 ಗಂಟೆ ವರೆಗೆ ಸಚಿವ ವಚ್ರ್ಯುವಲ್ ಸಂವಾದ ನಡೆಸುವರು. ಮಂಗಳ ಮತ್ತು ಬುಧವಾರದಂದು ದೂರವಾಣಿ(ಸಂಖ್ಯೆ: 8943873068) ಮೂಲಕ ಮಾತುಕತೆ ನಡೆಸಬಹುದಾಗಿದೆ. ವಿಸ್ತೃತವಾಗಿ ವಿಚಾರ ವಿನಿಮಯ ನಡೆಸಲು ಬಯಸುವವರು ಗುರು, ಶುಕ್ರವಾರದಂದು ಝೂಂ ಪ್ಲಾಟ್ ಫಾರಂ ಮೂಲಕ ಸಂವಾದ ನಡೆಸಬಹುದು. ಇದರ ಲಿಂಕ್ ಆಹಾರ ಖಾತೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವೆಬ್ ಸೈಟ್ ಗಳಲ್ಲಿ ಲಭ್ಯವಿದೆ.
ಆಹಾರ ಇಲಾಖೆಯ ಚಟುವಟಿಕೆಗಳನ್ನು ಇನ್ನಷ್ಟು ಸುಧಾರಿತಗೊಳಿಸುವ ಉದ್ದೇಶದಿಂದ ಲೋಪದೋಷಗಳಿದ್ದಲ್ಲಿ, ದೂರುಗಳಿದ್ದಲ್ಲಿ, ಅಭಿಪ್ರಾಯಗಳಿದ್ದಲ್ಲಿ ನೇರವಾಗಿ ಆಲಿಸುವ ನಿಟ್ಟಿನಲ್ಲಿ ಟಾಲ್ ಫ್ರೀ ನಂಬ್ರ 1967,
pg.civilsupplieskerala.gov.in ಎಂಬ ಪೆÇೀರ್ಟಲ್ ಈಗಾಗಲೇ ಅನುಷ್ಠಾನದಲ್ಲಿದೆ. min.food@kerala.gov.in ಎಂಬ ಈ-ಮೇಲ್ ವಿಳಾಸದಲ್ಲೂ ಅಭಿಪ್ರಾಯ, ಸಲಹೆಗಳನ್ನು, ದೂರುಗಳನ್ನು ಲಿಖಿತರೂಪದಲ್ಲಿ ಸಲ್ಲಿಸಬಹುದು.