ಕೊಟ್ಟಾಯಂ: ಸಚಿವ ಎಂ.ಎಂ.ಮಣಿ ಅವರ ಪೈಲಟ್ ಕರ್ತವ್ಯಕ್ಕೆ ತೆರಳಿದ್ದ ಪೋಲೀಸ್ ಜೀಪ್ ಪಲ್ಟಿಯಾದ ಘಟನೆ ಇಂದು ಸಂಜೆ ನಡೆದಿದೆ. ಕೊಟ್ಟಾಯಂನ ಚಂಗನಾಶೇರಿ ಬಳಿಯ ಮಮ್ಮುಟ್ಟಿಯಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಮೂವರು ಪೋಲೀಸರು ಗಾಯಗೊಂಡಿದ್ದಾರೆ.
ಇಂದು ಸಂಜೆ 4.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಪೈಲಟ್ ವಾಹನವಾಗಿ ತೆರಳಿದ್ದ ತ್ರೀಕೋಡಿತಾನಂ ಪೋಲೀಸ್ ಠಾಣೆಯ ಜೀಪು ಅಪಘಾತಕ್ಕೀಡಾಯಿತು. ಎಸ್‍ಐ ಸೇರಿದಂತೆ ಮೂವರು ಪೋಲೀಸ್ ಅಧಿಕಾರಿಗಳು ವಾಹನದಲ್ಲಿದ್ದರು. ಜೀಪ್ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಗಾಯಗೊಂಡ ಪೋಲೀಸರಿಗೆ ಪ್ರಥಮ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಯಿತು.