ತಿರುವನಂತಪುರ: ಸರ್ಕಾರ ನೀಡುವ ಉಚಿತ ಆಹಾರ ಕಿಟ್ ಅಗತ್ಯವಿಲ್ಲದವರು ಕೂಡಲೇ ಮಾಹಿತಿ ನೀಡಬೇಕು ಎಂದು ಆಹಾರ ಸಚಿವ ಜಿ.ಆರ್ ಅನಿಲ್ ಹೇಳಿರುವರು. ಈ ಮಾಹಿತಿಯನ್ನು ಪಡಿತರ ಅಂಗಡಿಗಳಿಗೆ ವರದಿ ಮಾಡಬೇಕು. ಕಿಟ್ ಅಗತ್ಯವಿಲ್ಲದವರು ಹಿಂದೆ ಸರಿಯಲು ಅವಕಾಶವಿದೆ ಎಂದು ಸಚಿವರು ಹೇಳಿದರು. ಅನುಚಿತವಾಗಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರು ಅದನ್ನು ಹಿಂತಿರುಗಿಸಲು ಸಿದ್ಧರಾಗಿರಬೇಕು. ಈವರೆಗೆ ಪಡೆದ ಪ್ರಯೋಜನಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದರು.
ಆಹಾರ ಇಲಾಖೆಯನ್ನು ಹೆಚ್ಚು ಜನಪ್ರಿಯಗೊಳಿಸಲಾಗುವುದು ಮತ್ತು ಕೊರೋನಾ ಸಮಯದ ಬೆಲೆ ಏರಿಕೆಯನ್ನು ತಡೆಯಲು ಸರ್ಕಾರಿ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ಮಾಸ್ಕ್ ಗಳೂ ಸೇರಿದಂತೆ ರಕ್ಷಣಾ ಸಾಧನಗಳಿಗೆ ಹೆಚ್ಚಿನ ದರ ವಿಧಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾನೂನು ಮಾಪನ ಪರೀಕ್ಷೆಯನ್ನು ತೀವ್ರಗೊಳಿಸಲಾಗುವುದು ಎಂದು ಅವರು ಹೇಳಿರುವರು.