ತಿರುವನಂತಪುರ: ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ಪಾಸ್‍ಪೋರ್ಟ್ ಸಂಖ್ಯೆಯನ್ನು ನಮೂದಿಸಲು ಕ್ರಮ ಕೈಗೊಳ್ಳುವಂತೆ ಕೋರಿ ಸಂಸದ ಅಡೂರ್ ಪ್ರಕಾಶ್ ಪ್ರಧಾನಿ, ವಿದೇಶಾಂಗ ಸಚಿವ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಪ್ರಸ್ತುತ, ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ಆಧಾರ್ ಸಂಖ್ಯೆಯನ್ನು ದಾಖಲಿಸಲಾಗುತ್ತದೆ. ಪ್ರಮಾಣಪತ್ರದಲ್ಲಿ ಪಾಸ್‍ಪೋರ್ಟ್ ಸಂಖ್ಯೆ ದಾಖಲಿಸದೆ ಇರುವ ಕಾರಣ ಗಲ್ಫ್ ರಾಷ್ಟ್ರಗಳಿಗೆ ತೆರಳುವವರು ತೊಂದರೆಗಳನ್ನು ಎದುರಿಸುತ್ತಿರುವುದನ್ನು ಗಮನಿಸಿ ಸಂಸದರು ಈ ಕ್ರಮಕ್ಕೆ ಒತ್ತಾಯಿಸಿರುವರು. ಇದನ್ನು ಪರಿಹರಿಸಲು, ಪಾಸ್‍ಪೋರ್ಟ್ ಸಂಖ್ಯೆಯನ್ನು ಪ್ರಮಾಣಪತ್ರದಲ್ಲಿ ಸೇರಿಸುವುದು ಅವಶ್ಯಕ ಎಂದು ಅಡೂರ್ ಪ್ರಕಾಶ್ ತಿಳಿಸಿದ್ದಾರೆ.ಸ್ವದೇಶಕ್ಕೆ ಮರಳಲು ಕಷ್ಟಪಡುತ್ತಿರುವ ವಲಸಿಗರಿಗೆ ವ್ಯಾಕ್ಸಿನೇಷನ್‍ನಲ್ಲಿ ಆದ್ಯತೆ ನೀಡುವುದನ್ನು ಪರಿಗಣಿಸುವಂತೆ ಅವರು ಕೇರಳ ಮುಖ್ಯಮಂತ್ರಿಯನ್ನು ಕೋರಿರುವರು.